ಕಣ್ಣೂರು: ಸೊಸೆ ಬಂದ ನಂತರ ಮನೆಯಲ್ಲಿದ್ದ ವಸ್ತುಗಳು ಒಂದೊಂದಾಗಿ ಕಳೆದು ಹೋಗುತ್ತಿರುವ ಬಗ್ಗೆ ಅತ್ತೆಗೆ ಅನುಮಾನ. ಬಳಿಕದ ವಿದ್ಯಮಾನದಲ್ಲಿ ಸೋಗು ಹಾಕಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೆಸರು, ವಿಳಾಸ ಬದಲಿಸಿ ಪೋಟೋಗ್ರಾಫರ್ ನನ್ನು ವಿವಾಹವಾದ ಎರ್ನಾಕುಳಂನ ಕುಜಿಪ್ಪಿಲ್ಲಿ ಅಯ್ಯಂಪಿಳ್ಳೈಯ ವೆನ್ಮಲಸ್ಸೆರಿ ಸನಿತಾ ಪ್ರದೀಪ್ (38) ಎಂಬವಳನ್ನು ಪೋಲೀಸರು ಶಂಕೆಯ ಮೇರೆಗೆ ಬಂಧಿಸಿದ್ದಾರೆ. ವಸಂತ ಎಂಬುವವರ ಚಿನ್ನವನ್ನು ಸನಿತಾ ಲಪಟಾಯಸಿದ ದೂರಿನ ಮೇರೆಗೆ ಬಂಧಿಸಲಾಗಿದೆ.
ಆರು ತಿಂಗಳ ಹಿಂದೆ ಬಸ್ ಪ್ರಯಾಣದ ವೇಳೆ ವಸಂತ ಅವರ ಪುತ್ರ ವಿವೇಕ್ ನನ್ನು ಭೇಟಿಯಾಗಿದ್ದ ಸನಿತಾ, ತನ್ನ ಹೆಸರು ಅಲೈಖಾ, ತಾನು ಅನಾಥೆ ಎಂದು ಹೇಳಿದ್ದಳು.
ಪರಿಚಯವಾದ ನಂತರ ಇಬ್ಬರೂ ಪ್ರೀತಿಸಿ ದೇವಸ್ಥಾನದಲ್ಲಿ ಹಾರ ಹಾಕಿ ಮದುವೆಯಾದರು. ಸೊಸೆ ಬಂದ ನಂತರ ಮನೆಯಿಂದ ಆಗಾಗ ಹಣ ನಾಪತ್ತೆಯಾಗುತ್ತಿರುವುದನ್ನು ವಸಂತ ಗಮನಿಸಿದ್ದರು.
ಕಳೆದ 10ರಂದು ತನ್ನ ಕೊಠಡಿಯ ಅಲ್ಮೇರಾ ತೆರೆಯಲು ಸಾಧ್ಯವಾಗದಿದ್ದಾಗ ವಸಂತ ಅಲೈಖಾಗೆ ಮಾಹಿತಿ ನೀಡಿದ್ದರು. ಸ್ವಲ್ಪ ಎಣ್ಣೆ ಹಾಕಿ ಎರಡು ದಿನದಲ್ಲಿ ತೆರೆಯಬಹುದು ಎಂದು ಸೊಸೆ ಉತ್ತರಿಸಿದ್ದಳು.
ಸಂಶಯದ ಕಾರಣ ಪಕ್ಕದ ಮನೆಯವರ ಸಹಾಯದಿಂದ ಅಲ್ಮೇರಾದ ಬಾಗಿಲು ತೆರೆದು ನೋಡಿದಾಗ ಅದರಲ್ಲಿದ್ದ ನಾಲ್ಕೂವರೆ ಪವನ್ ನ ಸರ, ಉಂಗುರ ಬಣ್ಣ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ.
ಬಳಿಕ ವಸಂತ ಪೋಲೀಸರಿಗೆ ದೂರು ನೀಡಿದ್ದು, ಚಿನ್ನಾಭರಣ ಕಳೆದು ಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಬಳಿಕ ನಡೆಸಿದ ವಿಚಾರಣೆಯಲ್ಲಿ ಸೊಸೆ ಅತ್ತೆಯ ಆಭರಣಗಳನ್ನು ಮುತ್ತೂಟ್ ಬ್ಯಾಂಕ್ ನಲ್ಲಿ ಅಡವಿರಿಸಿ ಬಳಿಕ ಅತ್ತೆಯ ಕದ್ದಚಿನ್ನಕ್ಕೆ ಹೋಲುವ ಆಭರಣ ತಂದಿರಿಸಿರುವುದು ತಿಳಿದುಬಂದಿದೆ.
ವಿವೇಕ್ ಅವರನ್ನು ವಿವಾಹವಾಗುವ ಮೊದಲು ಬೇರೊಂದೆಡೆ ವಿವಾಹವಾಗಿ ಮಹಿಳೆ ವಿಚ್ಛೇದನ ಪಡೆದಿಲ್ಲ ಎಂದು ಪೋಲೀಸರು ಕಂಡುಕೊಂಡಿದ್ದಾರೆ.




