HEALTH TIPS

ಗಲ್ವಾನ್​ ಘರ್ಷಣೆಯಲ್ಲಿ ನಾಲ್ಕೇ ಸೈನಿಕರು ಸತ್ತರೆಂದು ಸುಳ್ಳು ಹೇಳಿದ ಚೀನಾ; ಅಸಲಿ ವರದಿ ಈಗ ಬಹಿರಂಗ

              ಲಡಾಖ್: ಪೂರ್ವ ಲಡಾಖ್​ನ ಗಲ್ವಾನ್​ ಕಣಿವೆಯಲ್ಲಿ 2020ರ ಜೂನ್​ 15 ಮತ್ತು 16 ಮಧ್ಯರಾತ್ರಿ ನಡೆದ ರ್ಷಣೆಯಲ್ಲಿ ಮೃತ ಚೀನಾ ಸೈನಿಕರ ಸಂಖ್ಯೆಯ ಕುರಿತು ಚೀನಾ ಸುಳ್ಳಿನ ಕಂತೆಯನ್ನೇ ಹೇಳಿದ್ದು, ನಿಜವಾಗಿಯೂ ಮೃತಪಟ್ಟವರು 42 ಸೈನಿಕರು ಎಂದು ಆಸ್ಟ್ರೆಲಿಯದ ಪತ್ರಿಕೆ 'ದಿ ಕ್ಲಾಕ್ಸನ್​' ವರದಿ ಮಾಡಿದೆ.

           ಘರ್ಷಣೆ ನಡೆದ ಒಂದು ವರ್ಷದ ಬಳಿಕ ಈ ವರದಿ ಬಿಡುಗಡೆಗೊಂಡಿದೆ. ಈ ಘರ್ಷಣೆಯಲ್ಲಿ ಗಾಯಗೊಂಡ ಎರಡೂ ಸೇನೆಗಳ ಅನೇಕ ಯೋಧರು ಗಲ್ವಾನ್​ ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದರು. ನದಿಯಲ್ಲಿ ಚೀನಾದ 38 ಯೋಧರು ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ಒಬ್ಬ ಜೂನಿಯರ್​ ಸಾರ್ಜೆಂಟ್​ ಮಾತ್ರ ಕೊಚ್ಚಿಹೋಗಿದ್ದು, ಉಳಿದ ನಾಲ್ವರು ಸಾವನ್ನಪ್ಪಿದ್ದಾರೆ ಇಲ್ಲಿನ ತಾಪಮಾನ ಶೂನ್ಯಕ್ಕಿಂತ ಕೆಳಗೆ ಇದ್ದ ಕಾರಣ ಕೊರೆಯುತ್ತಿದ್ದ ನದಿ ನೀರಿನಲ್ಲಿ ಬಿದ್ದಿದ್ದ ಗಾಯಗೊಂಡ ಅವರ ಪೈಕಿ ಹಲವರು ಮೃಪಟ್ಟಿರುವುದಾಗಿ ವರದಿ ಹೇಳಿದೆ.

           ಗಡಿಯ ಆಯಕಟ್ಟಿನ ಗಲ್ವಾನ್​ನಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಮೀರಿ ಚೀನಾ ಸೇನೆ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಿತ್ತು. ಅಲ್ಲಿ ತನ್ನ ಗಸ್ತನ್ನು ಹೆಚ್ಚಿಸಿತ್ತು. ಗಡಿಯ ಬರ್​ ವಲಯದಲ್ಲಿ ಯಾವುದೇ ನಿರ್ಮಾಣ ಮಾಡುವಂತಿಲ್ಲ ಎಂಬ ಒಪ್ಪಂದವನ್ನೂ ಮುರಿದಿತ್ತು ಎನ್ನಲಾಗಿದೆ.

                            ಗಲ್ವಾನ್​ ಘರ್ಷಣೆ ನಡೆದದ್ದೇಕೆ?
            2020ರ ಮೇ ತಿಂಗಳಲ್ಲಿ ಪ್ಯಾಂಗಾಂಗ್​ ತ್ಸೊ ಸರೋವರದ ಕೆಲ ಪ್ರದೇಶವನ್ನು ಅತಿಕ್ರಮಿಸಿಕೊಂಡು ಕ್ಯಾತೆ ತೆಗೆದಿದ್ದ ಚೀನಾ, ಗಲ್ವಾನ್​ ಕಣಿವೆಯಲ್ಲಿ ಎಲ್​ಎಸಿ ಆಚೆಗೆ ವೀಣಾ ಗೋಪುರ, ಬಂಕರ್​ಗಳನ್ನು ನಿರ್ಮಿಸಿತ್ತು. ಇದನ್ನು ತೆರವುಗೊಳಿಸುವಂತೆ ಭಾರತದ ಒತ್ತಾಯವನ್ನು ಒಪ್ಪಿಕೊಂಡಿದ್ದರೂ ತೆರವುಗೊಳಿಸಿರಲಿಲ್ಲ. ಹೀಗಾಗಿ 2020ರ ಜೂನ್​ 15ರ ಸಂಜೆ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಪಡೆ, ವಿವಾದಾತ್ಮ ನಿರ್ಮಾಣಗಳನ್ನು ತೆಗೆಯಲು ಮುಂದಾಯಿತು. ಆಗ ಚೀನಾದ ಪೀಪಲ್ಸ್​ ಲಿಬರೇಷನ್​ ಆಮಿರ್ (ಪಿಎಲ್​ಎ) ಪ್ರತಿರೋಧ ವ್ಯಕ್ತಪಡಿಸಿತು. ಉಭಯ ಸೇನೆಗಳ ಮಧ್ಯೆ ಕಲ್ಲು ಮತ್ತು ಬಡಿಗೆಗಳಿಂದ ಮಧ್ಯರಾತ್ರಿಯವರೆಗೂ ಘರ್ಷಣೆ ನಡೆಯಿತು. ಇದರಿಂದ ಭಾರತ 20 ಯೋಧರು ಹುತಾತ್ಮರಾಗಿದ್ದರು.

           ಈ ನಡುವೆಯೇ ಚೀನಾದ ಬೀಜಿಂಗ್​ನಲ್ಲಿ ಚಳಿಗಾಲದ ಒಲಿಂಪಿಕ್ಸ್​ ಶುಕ್ರವಾರ ಚಾಲನೆಗೊಳ್ಳಲಿದ್ದು, ಇದರ ಕ್ರೀಡಾ ಜ್ಯೋತಿ ತರುವ ಗೌರವಕ್ಕೆ ಗಲ್ವಾನ್​ ಕಣಿವೆಯ ಸಂರ್ಷದಲ್ಲಿ ಗಾಯಗೊಂಡಿದ್ದ ಯೋಧನನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕ್ರಮ ಸರಿಯಲ್ಲ ಎಂದು ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ. ಚೀನಾ, ಕ್ರೀಡೆಯನ್ನು ರಾಜಕೀಯಗೊಳಿಸುತ್ತಿರುವುದು ನಾಚಿಕೆಗೇಡು ಎಂದು ಅಮೆರಿಕದ ಸೆನೆಟ್​ನ ವಿದೇಶಾಂಗ ವ್ಯವಹಾರ ಕುರಿತ ಸಮಿತಿ ಸದಸ್ಯ ಜಿಮ್​ ರಿಶ್​ ಹೇಳಿದ್ದಾರೆ.

            ಗಲ್ವಾನ್​ ಕಣಿವೆಯ ರ್ಷಣೆಯಲ್ಲಿ ಗಾಯಗೊಂಡ ಸೇನಾಧಿಕಾರಿ ಚಳಿಗಾಲದ ಒಲಿಂಪಿಕ್ಸ್​ನ ಪರೇಡ್​ನಲ್ಲಿ ಕ್ರೀಡಾಜ್ಯೋತಿ ತರುವುದನ್ನು ಖಂಡಿಸಿ ಉದ್ಘಾಟನಾ ಕಾರ್ಯಕ್ರಮವನ್ನು ಭಾರತ ಬಹಿಷ್ಕರಿಸಿದೆ. ಚೀನಾ ಕ್ರೀಡೆಯನ್ನು ರಾಜಕೀಯದ ವೇದಿಕೆಯನ್ನಾಗಿ ಮಾಡಿಕೊಂಡಿದ್ದು ವಿಷಾದನಿಯ. ಇದನ್ನು ಖಂಡಿಸಿ ಭಾರತದ ತಂಡ ಚಳಿಗಾಲದ ಒಲಿಂಪಿಕ್ಸ್​ನ ಉದ್ಘಾಟನೆ (ಫೆ. 4) ಮತ್ತು ಸಮಾರೋಪ (ಫೆ. 20) ಭಾಗವಹಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries