HEALTH TIPS

ಯುದ್ಧಪೀಡಿತ ಉಕ್ರೇನ್ ನಿಂದ 10 ದಿನಗಳಲ್ಲಿ 1.5 ಮಿಲಿಯನ್ ನಿರಾಶ್ರಿತರ ವಲಸೆ; ವಿಶ್ವಸಂಸ್ಥೆ

         ಉಕ್ರೇನ್: ರಷ್ಯಾ ಯುದ್ಧ ಘೋಷಿಸಿರುವ ಹಿನ್ನೆಲೆಯಲ್ಲಿ ಉಕ್ರೇನ್ ತೊರೆಯುತ್ತಿರುವವರ ನಿರಾಶ್ರಿತರ ಸಂಖ್ಯೆ 1.5 ಮಿಲಿಯನ್ ದಾಟಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 

         ಇದು ವಿಶ್ವ ಯುದ್ಧ-2 ರ ನಂತರದಲ್ಲಿ ಯೂರೋಪ್ ನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಿರಾಶ್ರಿತ ಬಿಕ್ಕಟ್ಟಾಗಿದೆ ಎಂದು ವಿಶಸಂಸ್ಥೆ ಹೇಳಿದೆ. 10 ದಿನಗಳಲ್ಲಿ ಉಕ್ರೇನ್ ನಿಂದ 1.5 ಮಿಲಿಯನ್ ನಿರಾಶ್ರಿತರು ನೆರೆ ರಾಷ್ಟ್ರಗಳಿಗೆ ತೆರಳಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. 

          ಈ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ನ ರಾಜ್ಯತ್ವ ಅಪಾಯದಲ್ಲಿದ್ದು, ಪಶ್ಚಿಮ ದೇಶಗಳ ನಿರ್ಬಂಧಗಳನ್ನು ಯುದ್ಧ ಘೋಷಣೆಗೆ ಹೋಲಿಕೆ ಮಾಡಿದ್ದಾರೆ ಹಾಗೂ ಮುತ್ತಿಗೆ ಹಾಕಲಾಗಿರುವ ಮರಿಯುಪೋಲ್ ಬಂದರು ನಗರದಲ್ಲಿ ಕದನ ವಿರಾಮದ ಭರವಸೆ ನೀಡಿದ್ದಾರೆ. ಶನಿವಾರ ರಾತ್ರಿಯಿಂದ ರಷ್ಯಾ ಪಡೆಗಳು ಮರಿಯುಪೋಲ್ ನಗರದ ಮೇಲೆ ಶೆಲ್ಲಿಂಗ್ ನ್ನು ತೀವ್ರಗೊಳಿಸಿವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries