HEALTH TIPS

ಭೂಮಿ ಮೇಲಿನ 100 ಅತ್ಯಂತ ಮಾಲಿನ್ಯ ನಗರಗಳ ಪೈಕಿ 63 ನಗರಗಳು ಭಾರತದಲ್ಲಿವೆ!

             ಸ್ವಿಡ್ಜರ್ ಲ್ಯಾಂಡ್: ಭೂಮಿ ಮೇಲಿನ 100 ಹೆಚ್ಚು ವಾಯು ಮಾಲಿನ್ಯ ಹೊಂದಿರುವ ನಗರಗಳ ಪೈಕಿ 63 ನಗರಗಳು ಭಾರತದ ನಗರಗಳಾಗಿವೆ ಎಂಬುದು ಆತಂಕಕಾರಿ ವಿಚಾರ.

                ಸತತ 2ನೇ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಲಿ ಅತ್ಯಂತ ಮಾಲಿನ್ಯ ನಗರ ಎಂಬ ಹಣೆಪಟ್ಟಿಯನ್ನ ಮತ್ತೆ ಹೊತ್ತುಕೊಂಡಿದೆ‌‌. ಐಕ್ಯೂಏರ್ ಬಿಡುಗಡೆ ಮಾಡಿನ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ 2021 ರಲ್ಲಿ ಭಾರತದ ವಾಯು ಮಾಲಿನ್ಯವು ಹದಗೆಟ್ಟಿದೆ. ಅನೇಕ ನಗರಗಳು ಮಾಲಿನ್ಯ ನಗರಗಳಾಗಿವೆ ಎಂದಿದೆ.

                 ಮಾರಣಾಂತಿಕ ಮತ್ತು ಸೂಕ್ಷ್ಮದರ್ಶಕ Pಒ2.5 ಮಾಲಿನ್ಯಕಾರಕದಲ್ಲಿ ಅಳೆಯಲಾದ ಸರಾಸರಿ ವಾಯು ಮಾಲಿನ್ಯವು ಪ್ರತಿ ಘನ ಮೀಟರ್‌ಗೆ 58.1 ಮೈಕ್ರೊಗ್ರಾಮ್ ಆಗಿದೆ, ಇದು ವಿಶ್ವ ಆರೋಗ್ಯ ಸಂಸ್ಥೆಯ(WHO) ವಾಯು ಗುಣಮಟ್ಟದ ಮಾರ್ಗಸೂಚಿಗಳಿಗಿಂತ 10 ಪಟ್ಟು ಹೆಚ್ಚು.

                ಭಾರತದಲ್ಲಿ ಯಾವುದೇ ನಗರವು Wಊಔ ಮಾನದಂಡವನ್ನು ಹೊಂದಿಲ್ಲ. ಉತ್ತರ ಭಾರತ ಅತ್ಯಂತ ಕೆಟ್ಟದಾಗಿದೆ. ದೆಹಲಿಯು ಸತತ ಎರಡನೇ ವರ್ಷ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿದೆ. ಮಾಲಿನ್ಯವು ಹಿಂದಿನ ವರ್ಷಕ್ಕಿಂತ ಶೇಕಡಾ 15 ರಷ್ಟು ಏರಿಕೆಯಾಗಿದೆ. ಇಲ್ಲಿ ವಾಯು ಮಾಲಿನ್ಯದ ಮಟ್ಟಗಳು Wಊಔನ ಸುರಕ್ಷತಾ ಮಿತಿಗಳಿಗಿಂತ ಸುಮಾರು 20 ಪಟ್ಟು ಹೆಚ್ಚಾಗಿದೆ.



ಜಾಗತಿಕ ಮಟ್ಟದಲ್ಲಿ ನವದೆಹಲಿ 100 ವಾಯುಮಾಲಿನ್ಯ ನಗರಗಳ ಪೈಕಿ 4ನೇ ಸ್ಥಾನದಲ್ಲಿದ್ದರೆ, ರಾಜಸ್ತಾನದ ಬಿವಾಡಿ ಪ್ರಥಮ, ಉತ್ತರಪ್ರದೇಶದ ಗಾಜಿಯಾಬಾದ್ ದ್ವಿತೀಯ ಮತ್ತು ಜಾನ್ ಪುರ್ 5 ನೇ ಸ್ಥಾನದಲ್ಲಿದೆ. ಉತ್ತರಪ್ರದೇಶ, ಹರಿಯಾಣ, ರಾಜಸ್ತಾನ, ಪಂಜಾಬ್ ನ ಬಹುತೇಕ ನಗರಗಳು ಟಾಪ್ 100 ನಗರಗಳ ಪೈಕಿ ಹೆಚ್ಚಿನ ಸ್ಥಾನದಲ್ಲಿವೆ.‌ಅದರಲ್ಲೂ ಹರಿಯಾಣ ಮತ್ತು ಉತ್ತರಪ್ರದೇಶದ ನಗರಗಳದ್ದೇ ಸಿಂಹಪಾಲು. ವಾಹನಗಳ ಹೊಗೆ, ಕಲ್ಲಿದ್ದಲು ಪವರ್ ಪ್ಲಾಂಟ್, ಕೈಗಾರಿಕಾ ತ್ಯಾಜ್ಯ, ಉರುವಲುಗಳಿಂದ ಹೊರಹೊಮ್ಮುವ ಹೊಗೆಯಿಂದ ಮಾಲಿನ್ಯ ಉಂಟಾಗುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries