HEALTH TIPS

ಕಾರುಣ್ಯ ಫಾರ್ಮಸಿಗಳಲ್ಲಿ ಅಗತ್ಯ ಔಷಧಗಳ ಕೊರತೆ: ಸಚಿವರಿಗೆ ತಪಾಸಣೆಯಿಂದ ಮನವರಿಕೆ; 10 ದಿನಗಳಲ್ಲಿ ಔಷಧಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಶಿಫಾರಸು

                                            

                      ತಿರುವನಂತಪುರ: ರಾಜ್ಯದ ಎಲ್ಲ ಕಾರುಣ್ಯ ಔಷಧಾಲಯಗಳನ್ನು ತಪಾಸಣೆಗೊಳಪಡಿಸಿ 10 ದಿನದೊಳಗೆ ಅಗತ್ಯ ಔಷಧಗಳ ಲಭ್ಯತೆ ಖಚಿತಪಡಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ನಿರ್ದೇಶಿಸಿದ್ದಾರೆ. ಕೆ.ಎಂ.ಎಸ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವೆ ಈ ಬಗ್ಗೆ ಸೂಚನೆ ನೀಡಲಾಗಿದೆ.

                 ಕಾರುಣ್ಯ ಫಾರ್ಮಸಿಗಳಲ್ಲಿ ಅಗತ್ಯ ಔಷಧಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಲಾಗುವುದು. ಆಸ್ಪತ್ರೆಗಳ ಅಧೀನದಲ್ಲಿರುವ ಔಷಧಾಲಯಗಳಲ್ಲಿ ಮತ್ತು ನಿಯಮಿತ ಅಂತರದಲ್ಲಿ ಖರೀದಿ ಸಮಿತಿಗಳ ಮೂಲಕ ಅಗತ್ಯ ಔಷಧಿಗಳ ಲಭ್ಯತೆಯನ್ನು ಅಧೀಕ್ಷಕರು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.

                ತಿರುವನಂತಪುರಂ ಮೆಡಿಕಲ್ ಕಾಲೇಜಿನ ಕಾರುಣ್ಯ ಫಾರ್ಮಸಿಯಲ್ಲಿ ಸಚಿವರು ನೇರ ತಪಾಸಣೆ ನಡೆಸಿದಾಗ ಔಷಧಗಳು ಲಭ್ಯವಿಲ್ಲ ಎಂದು ತಿಳಿದುಬಂದಿದೆ. ಔಷಧಾಲಯದಲ್ಲಿ ಲಭ್ಯವಿಲ್ಲದ ಔಷಧಗಳ ವಿವರವನ್ನು ಕೆಎಂಎಸ್‍ಸಿಎಲ್‍ಗೆ ನೀಡದಿರುವುದು ಕಂಡುಬಂದಿದೆ. ನಂತರ ಡಿಪೆÇೀ ವ್ಯವಸ್ಥಾಪಕರನ್ನು ಅಮಾನತುಗೊಳಿಸಲಾಗಿತ್ತು. ನಂತರ ಸಚಿವರು ರಾಜ್ಯದ ಎಲ್ಲ ಕಾರುಣ್ಯ ಔಷಧಾಲಯಗಳಲ್ಲಿ ತಪಾಸಣೆ ನಡೆಸಿ ಔಷಧಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು. ಬಡ ರೋಗಿಗಳು ಅವಲಂಬಿತವಾಗಿರುವ ಕಾರುಣ್ಯ ಫಾರ್ಮಸಿಯಲ್ಲಿ ಔಷಧಗಳ ಕೊರತೆ ಸುದ್ದಿಯಾಗುತ್ತಿದ್ದರೂ ಆರೋಗ್ಯ ಇಲಾಖೆಯಾಗಲಿ, ಸರಕಾರವಾಗಲಿ ಸಮರ್ಪಕವಾಗಿ ಮಧ್ಯಸ್ಥಿಕೆ ವಹಿಸಿಲ್ಲ.

            ಎಲ್ಲಾ ಕಾರುಣ್ಯ ಫಾರ್ಮಸಿಗಳ ಡಿಪೆÇೀ ಮ್ಯಾನೇಜರ್‍ಗಳು ಆ ಆಸ್ಪತ್ರೆಯ ವೈದ್ಯರು ಸೂಚಿಸಿದ ಔಷಧಿಗಳ ಇಂಡೆಂಟೇಶನ್ ಅನ್ನು ತಕ್ಷಣವೇ ಕೆ.ಎಂ.ಎಸ್.ಸಿ.ಎಲ್   ಗೆ ತಿಳಿಸಬೇಕು. ವೈದ್ಯರು, ವಿಭಾಗಗಳ ಮುಖ್ಯಸ್ಥರು ಮತ್ತು ಆಸ್ಪತ್ರೆ ಸೂಪರಿಂಟೆಂಡೆಂಟ್‍ಗಳು ಭೇಟಿಯಾಗಿ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳು, ಇಂಪ್ಲಾಂಟ್‍ಗಳು ಮತ್ತು ಪರಿಕರಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಇದನ್ನು ಆಸ್ಪತ್ರೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.

              ವೈದ್ಯರು ನೀಡುವ ಪಟ್ಟಿಗೆ ಅನುಗುಣವಾಗಿ ಜೆನೆರಿಕ್ ಔಷಧಗಳನ್ನೂ ಸೂಚಿಸಬೇಕು. ವೈದ್ಯರು ಸೂಚಿಸಿದ ಕೂಡಲೇ ಹೊಸ ಔಷಧಗಳನ್ನು ಇಂಡೆಂಟ್ ಮಾಡಿ ಮುಂದಿನ ಖರೀದಿಗೆ ಸೇರಿಸುವಂತೆ ಡಿಪೆÇೀ ಮ್ಯಾನೇಜರ್ ಗಳಿಗೆ ಸಚಿವರು ಸೂಚಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries