HEALTH TIPS

ಗುರುವಾಯೂರಿನಲ್ಲಿ ಇನ್ನು ನೇರ ದರ್ಶನ; ಆನ್‍ಲೈನ್ ನೋಂದಣಿ ರದ್ದು

                    ತ್ರಿಶೂರ್: ಗುರುವಾಯೂರ್ ದೇವಸ್ಥಾನದ ದರ್ಶನಕ್ಕಾಗಿ ಆನ್‍ಲೈನ್ ನೋಂದಣಿಯನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ  ಗುರುವಾಯೂರ್ ದೇವಸ್ವಂ ಮಂಡಳಿ ನಿರ್ಧಆರ ಕೈಗೊಂಡಿದೆ. ಆದೇಶವಾದ ತಕ್ಷಣ ಆನ್‍ಲೈನ್ ನೋಂದಣಿಯನ್ನು ರದ್ದುಗೊಳಿಸಲಾಗಿದೆ. 

                     ನೂತನ ದೇವಸ್ವಂ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ ಬಳಿಕ ಮಧ್ಯಾಹ್ನ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ದೇವಸ್ವಂ ಮಂಡಳಿಗೆ ಡಾ.ವಿ.ಕೆ.ವಿಜಯನ್ ಮತ್ತು ಮಾಜಿ ಸಂಸದ ಚೆಂಗರಾ ಸುರೇಂದ್ರನ್ ಅವರನ್ನು ಸರ್ಕಾರ ನಾಮನಿರ್ದೇಶನ ಮಾಡಿತ್ತು. ಇಬ್ಬರ ಪ್ರಮಾಣ ವಚನದ ನಂತರ ನಡೆದ ಸಭೆಯಲ್ಲಿ ಡಾ.ವಿ.ಕೆ.ವಿಜಯನ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇವರು ಕೇರಳ ವರ್ಮ ಕಾಲೇಜಿನ ನಿವೃತ್ತ ಅಧ್ಯಾಪಕರು.

             ಕೊರೋನಾ ವಿಸ್ತರಣೆಯ ಹಿನ್ನೆಲೆಯಲ್ಲಿ ದೇವಾಲಯದ ಭೇಟಿಗಳ ಮೇಲಿನ ನಿರ್ಬಂಧಗಳ ಸರಣಿಯ ಭಾಗವಾಗಿ ಆನ್‍ಲೈನ್ ನೋಂದಣಿ ವ್ಯವಸ್ಥೆಮಾಡಲಾಗಿತ್ತು. ಆದರೆ, ನಿಯಮಾವಳಿ ಸಡಿಲಿಕೆಯಿಂದಾಗಿ ಆನ್‍ಲೈನ್ ನೋಂದಣಿಯನ್ನು ಕೈಬಿಡಲು ದೇವಸ್ವಂ ಮಂಡಳಿ ನಿರ್ಧರಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries