HEALTH TIPS

14ರಿಂದ ಪೆರ್ಲ ಬಜಕೂಡ್ಲು ಜಾತ್ರಾಮಹೋತ್ಸವ

             ಪೆರ್ಲ:  ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾ. 14ರಿಂದ 19ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ದೇಲಂಪಾಡಿ ಅಅನಿರುದ್ಧ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.

         14ರಂದು ಬೆಳಗ್ಗೆ ಗಣಪತಿ ಹವನದೊಂದಿಗೆ ಧ್ವಜಾರೋಹಣ ನಡೆಯುವುದು. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಶ್ರೀದೇವರ ಬಲಿ ಉತ್ಸವ ನಡೆಯುವುದು. 15ರಂದು ಬೆಳಗ್ಗೆ 10ಕ್ಕೆ ಶ್ರೀದೇವರ ದರ್ಶನ ಬಲಿ, ರಾತ್ರಿ ಶ್ರೀ ಭೂತಬಲಿ, ಕಟ್ಟೆಪೂಜೆ, 16ರಂದು ರಾತ್ರಿ 8.30ಕ್ಕೆ ದೀಪೋತ್ಸವ, ಶ್ರೀಭೂತಬಲಿ, ಶ್ರೀದೇವರ ಪಡುಭಾಗಕ್ಕೆ ಸವಾರಿ, ಕಟ್ಟೆಪೂಜೆ ನಡೆಯುವುದು. 17ರಂದು ಬೆಳಗ್ಗೆ ಅಯ್ಯಂಗಾಯಿ ದರ್ಶನ ಬಲಿ, ನವಕಾಭಿಷೇಕ, ರಾತ್ರಿ ಶ್ರೀಭೂತಬಲಿ, ಕಟ್ಟೆಪೂಜೆ, ಶ್ರೀದೇವರ ರಥೋತ್ಸವ, ಬೆಡಿ ಸೇವೆ ನಡೆಯುವುದು. 18ರಂದು 1.30ಕ್ಕೆ ಶ್ರೀದೇವರ ಬಲಿ ಉತ್ಸವ, ಕಟ್ಟೆಪೂಜೆ, ಶ್ರೀದೇವರ ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣದಲ್ಲಿ ಪ್ರಸಾದ ವಿತರಣೆ, ಬಟ್ಟಲುಕಾಣಿಕೆ, ಧ್ವಜಾವರೋಹಣ ನಡೆಯುವುದು. 19ರಂದು ಶ್ರೀ ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries