HEALTH TIPS

ಡೀಸೆಲ್ ಬೆಲೆ ಲೀಟರ್​ಗೆ 25 ರೂಪಾಯಿ ಹೆಚ್ಚಳ; ಚಿಂತೆ ಯಾರಿಗೆ?

              ನವದೆಹಲಿ: ಈ ಹಿಂದೆಯೇ ಸುಳಿವು ಇದ್ದಂತೆ ತೈಲ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಡೀಸೆಲ್​ ದರ ಲೀಟರ್​ವೊಂದಕ್ಕೆ 25 ರೂಪಾಯಿ ಏರಿದೆ. ಅದಾಗ್ಯೂ ಚಿಲ್ಲರೆಯಾಗಿ ಡೀಸೆಲ್ ಭರಿಸಿಕೊಳ್ಳುವ ವಾಹನ ಮಾಲೀಕರು ಚಿಂತೆ ಮಾಡುವಂತಿಲ್ಲ. ಹಾಗಾದರೆ, ಈ ಬೆಲೆ ಏರಿಕೆಯ ಚಿಂತೆ ಯಾರಿಗೆ?

          ಹೌದು.. ಡೀಸೆಲ್​​ ದರದಲ್ಲಿ ಪ್ರತಿ ಲೀಟರ್​ಗೆ 25 ರೂ. ಹೆಚ್ಚಳವಾಗಿದ್ದರೂ ಚಿಲ್ಲರೆಯಾಗಿ ಡೀಸೆಲ್​ ಭರಿಸಿಕೊಳ್ಳುವ ವಾಹನ ಮಾಲೀಕರಿಗೆ ಅದರ ಬಿಸಿ ಸದ್ಯಕ್ಕಂತೂ ತಟ್ಟುವಂತಿಲ್ಲ. ಏಕೆಂದರೆ ಈ ಬೆಲೆ ಏರಿಕೆ ಸದ್ಯಕ್ಕೆ ಸಗಟು ಮಾರಾಟಗಾರರಿಗಷ್ಟೇ ಅನ್ವಯಿಸುವಂಥದ್ದು.

            ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಯಲ್ಲಿ ಶೇ. 40ರಷ್ಟು ಏರಿಕೆಯಾದ ಹಿನ್ನೆಲೆಯಲ್ಲಿ ಡೀಸೆಲ್​ ಸಗಟು ಮಾರಾಟ ಬೆಲೆಯಲ್ಲಿ ಪ್ರತಿ ಲೀಟರ್​ಗೆ ಈ ಥರ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅದಾಗ್ಯೂ ಡೀಸೆಲ್ ಚಿಲ್ಲರೆ ಮಾರಾಟ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries