HEALTH TIPS

ಕೇರಳದ ಪ್ರಸಿದ್ಧ ತಿಂಡಿ 'ಪುಟ್ಟು' ಎಂದರೆ ಈ ಪುಟ್ಟ ಬಾಲಕನಿಗೆ ಇಷ್ಟವೇ ಇಲ್ಲ; ಆದರೆ, ಶಾಲೆ ಪರೀಕ್ಷೆಯಲ್ಲಿ ಬರೆದ ಪುಟ್ಟು ಪ್ರಬಂಧ ಹಿಟ್ ಆಯ್ತು!

             ತಿರುವನಂತಪುರ: ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಐಟಿ ದಂಪತಿಗಳಾದ ಸೋಜಿ ಜೋಸೆಫ್ ಮತ್ತು ದಿಯಾ ಅವರಿಗೆ ಕೇರಳದ ಕೋಝಿಕ್ಕೋಡ್ ನಲ್ಲಿ ತಮ್ಮ ಮೂಲ ಮನೆ ಮುಕ್ಕಮ್ ನಲ್ಲಿ ಪೂರ್ವಜರ ಮೂರು ಎಕರೆ ಜಮೀನು ಇದೆ. 

              ಪ್ರತಿ ಎರಡು ವಾರಗಳಿಗೊಮ್ಮೆ ತಮ್ಮ ಊರಿನ ಜಮೀನಿಗೆ ಹೋಗಿ ಬಂದಾಗ ಈ ದಂಪತಿ ತಮ್ಮೊಂದಿಗೆ ಮಾಗಿದ ಬಾಳೆಹಣ್ಣಿನ ಗೊನೆಯನ್ನು ತೆಗೆದುಕೊಂಡು ಬರುತ್ತಿದ್ದರು. ಬಾಳೆಹಣ್ಣು ತಿಂದು ಮುಗಿಯದಿದ್ದಾಗ ತಮ್ಮೂರಿನ ಕೇರಳದ ಪ್ರಸಿದ್ಧ ತಿಂಡಿ ಪುಟ್ಟು ತಯಾರಿಸುತ್ತಿದ್ದರು.

              ಆದರೆ ಅವರ 9 ವರ್ಷದ ಮಗ ಜೈಸ್ ಜೋಸೆಫ್ ಸೋಜಿ ಅಲ್ಲಿನ ಪುಟ್ಟು ತಿಂಡಿಯನ್ನು ಎಷ್ಟು ದ್ವೇಷಿಸುತ್ತಿದ್ದ ಎಂದರೆ ನನಗೆ ಇಷ್ಟವಿಲ್ಲದ ಅತಿ ಕೆಟ್ಟ ಆಹಾರ ಪದಾರ್ಥ ಪುಟ್ಟು ಎಂದು ಶಾಲೆಯ ಪರೀಕ್ಷೆಯಲ್ಲಿ ಕೂಡ ಬರೆದಿದ್ದ. 3ನೇ ತರಗತಿಯಲ್ಲಿ ಸಣ್ಣ ಪ್ರಬಂಧ ವಿಷಯ 'Puಣಣu bಡಿeಚಿಞs ಡಿeಟಚಿಣioಟಿshiಠಿs' ನಲ್ಲಿ ಪುಟ್ಟುವಿನ ಮೇಲಿರುವ ತನ್ನ ಅಸಡ್ಡೆ, ಸಿಟ್ಟನ್ನು ಈ ಪುಟ್ಟ ಬಾಲಕ ಬರೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

             ಪುಟ್ಟು ತಿಂಡಿ ಮಾಡಿದರೆ ಅದರ ಜೊತೆ ಪಾಜಾಮ್ ಕಾಂಬಿನೇಷನ್ ತಿನಿಸು ತಯಾರಿಸಿ ಒಟ್ಟಿಗೆ ತಿನ್ನುವುದು ಕೇರಳಿಗರ ರೂಢಿ. ಸೋಜಿ ಮತ್ತು ದಿಯಾ ಊರಿಗೆ ಹೋದರೆ ಬಾಳೆಗೊನೆ ತಂದು ಅದರಿಂದ ಪುಟ್ಟು ತಯಾರಿಸಿ ಅಕ್ಕಪಕ್ಕದ ಮನೆಗೆಲ್ಲಾ ಹಂಚುತ್ತಾರೆ. ಬಾಳೆಹಣ್ಣು ಮುಗಿಯುವವರೆಗೆ ಪುಟ್ಟು ತಿಂಡಿ ಮಾಡುವ ಕೆಲಸ ಮುಂದುವರಿಯುತ್ತದೆ. 

             ಬಾಲಕ ಜೈಸ್ ಬೆಂಗಳೂರಿನ ಎಸ್ ಎಫ್ಎಸ್ ಅಕಾಡೆಮಿಯಲ್ಲಿ ಓದುತ್ತಿದ್ದು ಬೆಳಗಿನ ತಿಂಡಿಗೆ ಅಪ್ಪಂ, ಚಪಾತಿ-ಚಿಕನ್ ಸಾಂಬಾರು ಎಂದರೆ ಇಷ್ಟ. ಆದರೆ ಪುಟ್ಟು-ಪಾಜಾಮ್ ಅವನಿಗೆ ಇಷ್ಟವೇ ಇಲ್ಲ. ಪುಟ್ಟು ಮಾಡಿದ್ದು ನೋಡಿದರೆ ನನ್ನ ಮಗ ಗಲಾಟೆ ಮಾಡುತ್ತಾನೆ ಎನ್ನುತ್ತಾರೆ ದಿಯಾ.

           ತಾನು ಎಷ್ಟೇ ಗಲಾಟೆ ಮಾಡಿದರೂ ಅಮ್ಮ ಪುಟ್ಟು ಮಾಡದೆ ಬಿಡುವುದಿಲ್ಲ ಎಂದು ಗೊತ್ತಾದ ಮೇಲೆ ಜೈಸ್ ಗೆ ಶಾಲೆಯಲ್ಲಿ ಪರೀಕ್ಷೆಗೆ ಅದೇ ಪ್ರಶ್ನೆ ಬಂದಾದ ಚೆನ್ನಾಗಿ ಪ್ರಬಂಧ ಬರೆದಿದ್ದಾನೆ. ಅವನು ಬರೆದ ಪ್ರಬಂಧ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕಂಡು ಮಗನ ಪುಟ್ಟು ಮೇಲಿನ ಅಸಡ್ಡೆ ಕಂಡು ಕೆಲವು ದಿನ ಪುಟ್ಟು ಮಾಡಲೇ ಇಲ್ಲ, ಹಾಗೆಂದು ಮಾಡದೆ ಇರುವುದಿಲ್ಲ. ಪುಟ್ಟು ನಮ್ಮೂರಿನ ತಿಂಡಿ ಮಾಡುತ್ತಿರುತ್ತೇನೆ ಎಂದು ನಗುತ್ತಾ ದಿಯಾ ಹೇಳುತ್ತಾರೆ.

              ಜೈಸ್ ಉತ್ತರ ಪತ್ರಿಕೆಯಲ್ಲಿ ಬರೆದ ಪುಟ್ಟುವಿನ ಮೇಲಿನ ಸಿಟ್ಟಿನ ಪ್ರಬಂಧವನ್ನು ಅವರ ಇಂಗ್ಲಿಷ್ ಶಿಕ್ಷಕಿ ಶೀಬಾ ರಿಚರ್ಡ್ ಶಾಲೆಯ ಮ್ಯಾಗಜಿನ್ ನಲ್ಲಿ ಹಂಚಿಕೊಂಡಿದ್ದರು. ಅದನ್ನು ಬಾಲಕನ ತಂದೆ ಸೋಜಿ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹಂಚಿಕೊಂಡರು. 

             ನಮ್ಮ ಶಾಲೆಯ ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ ಬೆಳೆಸುವುದು ನಮ್ಮ ಉದ್ದೇಶವಾಗಿದೆ. 3ನೇ ತರಗತಿಗೆ ಪುನರಾವರ್ತಿತ ಪರೀಕ್ಷೆ ಮಾಡಿದಾಗ ಪುಟ್ಟುವಿನ ಬಗ್ಗೆ ಸಣ್ಣ ಪ್ರಬಂಧ ಚೆನ್ನಾಗಿ ಬರೆದಿದ್ದಾನೆ. ಅವನು ಬರೆದ ರೀತಿ, ವಿವರಿಸಿದ ರೀತಿ ನನಗೆ ಇಷ್ಟವಾಯಿತು ಎಂದು ಮಂಗಳೂರು ಮೂಲದ ಶಿಕ್ಷಕಿ ಶೀಬಾ ಹೇಳುತ್ತಾರೆ.

            ಜೈಸ್ ಅಕ್ಕ, ಏಳನೇ ತರಗತಿಯ ಲಿಜ್ ಮರಿಯಾ ಸೋಜಿ ಮತ್ತು ಕಿರಿಯ ಸಹೋದರ ಕ್ರಿಸ್ ಜೋಸೆಫ್ ಸೋಜಿ ಕೂಡ ಸಂತೋಷಗೊಂಡಿದ್ದಾರೆ. ನಟ ಉನ್ನಿ ಮುಕುಂದನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ನೋಡಿದಾಗ ಸಹಜವಾಗಿ ಪುಟ್ಟು ಬಗ್ಗೆ ಬರೆಯೋಣ ಎಂದು ಅನಿಸಿತು. ನನ್ನ ಉತ್ತರ ಇಷ್ಟೊಂದು ಜನಪ್ರಿಯವಾಗಬಹುದು ಎಂದು ಪುಟ್ಟ ಮಕ್ಕಳ ರೀತಿಯಲ್ಲಿಯೇ ಮುಗ್ಧವಾಗಿ ಉತ್ತರ ಕೊಡುತ್ತಾನೆ ಜೈಸ್.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries