ನವದೆಹಲಿ:ಇಂಧನ ಬೆಲೆಗಳ ಸತತ ಏರಿಕೆಗಾಗಿ ಸರಕಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್,ಕಳೆದ ಎಂಟು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ ಗಳಿಸಿರುವ 26 ಲ.ಕೋ.ರೂ.ಗಳ ಲೆಕ್ಕ ನೀಡುವಂತೆ ಆಗ್ರಹಿಸಿದೆ.
0
samarasasudhi
ಮಾರ್ಚ್ 28, 2022
ನವದೆಹಲಿ:ಇಂಧನ ಬೆಲೆಗಳ ಸತತ ಏರಿಕೆಗಾಗಿ ಸರಕಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್,ಕಳೆದ ಎಂಟು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ ಗಳಿಸಿರುವ 26 ಲ.ಕೋ.ರೂ.ಗಳ ಲೆಕ್ಕ ನೀಡುವಂತೆ ಆಗ್ರಹಿಸಿದೆ.
'ಪೂರ್ಣ ಬಲದೊಂದಿಗೆ ಹೇಳುತ್ತಿದ್ದೇನೆ,ಎಂಟು ವರ್ಷಗಳಲ್ಲಿ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ಲೂಟಿಯ ಮೂಲಕ 26 ಲ.ಕೋ.ರೂ.ಗಳ ಲಾಭವನ್ನು ಗಳಿಸಿದೆ. ಮತದಾರರನ್ನು ವಂಚಿಸಲು 137 ದಿನಗಳ ಕಾಲ ಮೌನವಾಗಿದ್ದ ಸರಕಾರ ಕೇವಲ ಏಳು ದಿನಗಳಲ್ಲಿ ಪ್ರತಿ ಲೀ.ಗೆ ನಾಲ್ಕು ರೂ.ಗೂ ಅಧಿಕ ಲೂಟಿ ಮಾಡಿದೆ ' ಎಂದು ಟ್ವೀಟಿಸಿರುವ ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ ಸುರ್ಜೆವಾಲಾ,ಪೆಟ್ರೋಲ್ ಬೆಲೆಗಳ ಇಳಿಕೆಯ ಹೆಗ್ಗಳಿಕೆಯನ್ನು ತನ್ನ ಅದೃಷ್ಟಕ್ಕೆ ನೀಡಿ ಪ್ರತಿಪಕ್ಷಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ದ ಹಳೆಯ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ.
ವೀಡಿಯೊವನ್ನು ಟ್ಯಾಗ್ ಮಾಡಿರುವ ಸುರ್ಜೆವಾಲಾ.ಈಗ ಯಾರ ದುರಾದೃಷ್ಟ ಮತ್ತು ದುರುದ್ದೇಶದಿಂದ ಜನರು ಹಣದುಬ್ಬರದಿಂದ ನರಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.