HEALTH TIPS

ಶಿಕ್ಷಕರ ವಿರುದ್ಧ ಠಾಣೆಯ ಮೆಟ್ಟಿಲೇರಿದ 3ನೇ ಕ್ಲಾಸ್​ ವಿದ್ಯಾರ್ಥಿ: ಬಾಲಕನ ಮಾತು ಕೇಳಿ ಪೊಲೀಸರೇ ಶಾಕ್​!

             ಹೈದರಾಬಾದ್​: ಶಿಕ್ಷಕರ ವಿರುದ್ಧ 8 ವರ್ಷದ ಬಾಲಕನೊಬ್ಬ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಅಪರೂಪದ ಪ್ರಸಂಗ ತೆಲಂಗಾಣದ ಮೆಹಬೂಬಬಾದ್​ ಜಿಲ್ಲೆಯ ಬಯ್ಯಾಪುರಂ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

           ಪೊಲೀಸ್​ ಠಾಣೆಗೆ ಅಳುತ್ತಾ ಬಂದ ಬಾಲಕನನ್ನು ಪೊಲೀಸರು ಪ್ರಶ್ನಿಸಿದಾಗ, ಬಾಲಕ ಕೊಟ್ಟ ಉತ್ತರ ಕೇಳಿ ಪೊಲೀಸರೇ ಶಾಕ್​ ಆಗಿದ್ದಾರೆ.

         ವಿವರಣೆಗೆ ಬರುವುದಾದರೆ, ಅನಿಲ್​ ಹೆಸರಿನ ಬಾಲಕ ಬಯ್ಯಾರಾಮ್​ ಮಂಡಲದ ಖಾಸಗಿ ಶಾಲೆಯೊಂದರಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಶನಿವಾರ ಪೊಲೀಸ್​ ಠಾಣೆಗೆ ಆಗಮಿಸಿದ ಬಾಲಕ, ತನ್ನ ಶಾಲಾ ಶಿಕ್ಷಕರಾದ ಸನ್ನಿ ಮತ್ತು ವೆಂಕಟ್​ ವಿರುದ್ಧ ದೂರು ಸ್ವೀಕರಿಸಿ ಕ್ರಮ ಜರುಗಿಸುವಂತೆ ಪೊಲೀಸರನ್ನು ಕೇಳಿದ್ದಾನೆ. ಈ ವೇಳೆ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಕೊಂಚವೂ ಹೆದರದೆ ಆತ ಕೊಟ್ಟ ಉತ್ತರ ಕೇಳಿ ಪೊಲೀಸರೇ ಶಾಕ್​ ಆಗಿದ್ದಾರೆ.

            ಇದಾದ ಬಳಿಕ ಬಾಲಕನನ್ನು ಶಾಲೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಯಿತು. ಈ ವೇಳೆ ತನಗೆ ಹೊಡೆದ ಶಿಕ್ಷಕರನ್ನು ಬಾಲಕ ತೋರಿಸಿದ್ದಾನೆ. ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕರು ಶಿಸ್ತುಮರೆತಿದ್ದು, ಅವರಿಗೆ ಪೊಲೀಸರು ಸಮಾಲೋಚನೆ ನೀಡಿದರು.' ಇನ್ನೊಮ್ಮೆ ಮಕ್ಕಳೊಂದಿಗೆ ಸರಿಯಾಗಿ ನಡೆದುಕೊಳ್ಳುವಂತೆ ಶಿಕ್ಷಕರಿಗೆ ತಿಳಿ ಹೇಳಿದರು.

           ಪುಟ್ಟ ವಯಸ್ಸಿನಲ್ಲಿಮ ದೂರು ಕೊಡಲು ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಬಾಲಕನ ಧೈರ್ಯವನ್ನು ಪೊಲೀಸರು ಮೆಚ್ಚಿಕೊಂಡರು. ಅಲ್ಲದೆ, ಠಾಣೆಗೆ ಆಗಮಿಸುವಾಗ ಮಾಸ್ಕ್​ ಧರಿಸಿ ಕರೊನಾ ನಿಯಮಗಳನ್ನು ಪಾಲಿಸಿದ ರೀತಿಯು ಇಷ್ಟವಾಗಿದೆ. ಇದೀಗ ಈ ಘಟನೆ ಮೆಹಬೂಬಬಾದ್​ ಜಿಲ್ಲೆ ಭಾರೀ ಚರ್ಚೆಯ ವಿಷಯವಾಗಿದೆ. ಶಿಕ್ಷಕರು ಹೊಡೆದರೆ ಅಳುತ್ತಾ ಮನೆಗೆ ಹೋಗುತ್ತಿರುವ ಮಕ್ಕಳನ್ನು ನಾವು ನೋಡಿದ್ದೇವೆ. ಆದರೆ, ಪೊಲೀಸ್ ಠಾಣೆಗೆ ಹೋಗಿ ಈ ರೀತಿ ದೂರು ನೀಡುವುದು ಹಾಸ್ಯಾಸ್ಪದ ಎಂದು ಹಲವರು ಪ್ರತಿಕ್ರಿಯಿಸುತ್ತಿದ್ದಾರೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries