ಬದಿಯಡ್ಕ: ನಿರಂತರ ಚಟುವಟಿಕೆಗಳ ಮೂಲಕ 50ವರ್ಷಗಳನ್ನು ಪೂರೈಸಿದ ಕಲಾವೇದಿಕೆಯ ಕಲಾ ಸೇವೆ, ಸಾಂಸ್ಕøತಿಕ, ಸಾಮಾಜಿಕ ರಂಗದ ಕೊಡುಗೆ ಅಪಾರವಾದುದು. ಸಮಾಜದ ಅಭಿವೃದ್ಧಿಯಲ್ಲಿ ಇಂತಹ ಸಂಘಟನೆಗಳ ಪಾತ್ರ ಹಿರಿದು ಎಂದು ಜಯದೇವ ಖಂಡಿಗೆ ಅಭಿಪ್ರಾಯ ಪಟ್ಟರು.
ಅವರು ಸಂಗಮ ಕಲಾವೇದಿಕೆ ಬದಿಯಡ್ಕ ಇದರ 50ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ರಾಜ್ಯ ಸದಸ್ಯರಾಗಿ ಆಯ್ಕೆಯಾದ ಅಖಿಲೇಶ್ ನಗುಮುಗಂ ಇವರಿಗೆ ಸನ್ಮಾನ ಸಮಾರಂಭವನ್ನು ಇಂಟಿಗ್ರೇಟೆಡ್ ರೂರಲ್ ಎಗ್ರಿ ನರ್ಸರಿ ರಿಸೋರ್ಟಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಲೆ, ಕಲಾವಿದರನ್ನು ಪೆÇ್ರೀತ್ಸಾಹಿಸುತ್ತಾ, ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ಗಡಿನಾಡಿನ ಎಲೆಮರೆಯ ಕಾಯಿಯಂತಿದ್ದ ಅದೆಷ್ಟೋ ಕಲಾವಿದರನ್ನು, ಪ್ರತಿಭೆಗಳನ್ನು ಬೆಳಕಿಗೆ ತಂದ ಅಖಿಲೇಶ್ ಅವರನ್ನು ಸನ್ಮಾನಿಸುವ ಮೂಲಕ ಕಲಾವೇದಿಕೆ ಸಮಾಜದ ಸಾಧಕರನ್ನು ಗುರುತಿಸುವತ್ತಲೂ ಗಮನ ಹರಿಸಿರುವುದು ಶ್ಲಾಘನೀಯ ಎಂದರು. ಗಂಗಾಧರ ಆಳ್ವ ಪೆರಡಾಲ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲಾವೇದಿಕೆಯ ಒಗ್ಗಟ್ಟು ಹಾಗೂ ಸೃಜನಶೀಲ ಚಟುವಟಿಕೆಗಳು ನಿರಂತರ ನಡೆಯುತಿರಲಿ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಸದಸ್ಯರಾಗಿ ಆಯ್ಕೆಯಾದ ಅಖಿಲೇಶ್ ನಗುಮುಗಂ ಇವರನ್ನು ಸನ್ಮಾನಿಸಲಾಯಿತು. ನಿವೃತ್ತ ಡಿವೈಎಸ್ಪಿ ಪ್ರಕಾಶ್ ನೀರ್ಚಾಲು, ಅಬೂಬಕ್ಕರ್ ಬದಿಯಡ್ಕ, ತಿರುಪತಿ ಭಟ್ ಬದಿಯಡ್ಕ, ಪೆÇ್ರ.ಶ್ರೀನಾಥ್, ಹಸನ್ ಬದಿಯಡ್ಕ, ಆರ್.ಕೆ. ಬದಿಯಡ್ಕ, ಜಗನ್ನಾಥ ರೈ ಪೆರಡಾಲ, ರಮೇಶ್ ಶೆಟ್ಟಿ, ಚಂದ್ರಶೇಖರ ಕುರುಪ್ ಮೊದಲಾದವರು ಉಪಸ್ಥಿತರಿದ್ದರು.
ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು ವಸಂತ ಬಾರಡ್ಕ ಪ್ರಾರ್ಥನೆ ಹಾಡಿದರು. ಬಳಿಕ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ಗಜೇಂದ್ರ ಮೋಕ್ಷ ಯಕ್ಷಗಾನ ಬಯಲಾಟ ನಡೆಯಿತು.

