ಬದಿಯಡ್ಕ: ಕೊಲ್ಲಿ ರಾಷ್ಟ್ರದಲ್ಲಿ ಕಳೆದ ವರ್ಷ ನಿಧನರಾದ ಮಾವಿನಕಟ್ಟೆ ದ್ವಾರಕನಗರದ ರಂಜಿತ್ ಕುಮಾರ್ ಅವರ ಕುಟುಂಬಕ್ಕೆ ಭಾನುವಾರ ಸಹಾಯಧನ ಹಸ್ತಾಂತರಿಸಲಾಯಿತು.
ಧನ ಸಹಾಯಕ್ಕಾಗಿ ಕಳೆದ ವಾರ ರಂಜು ಟ್ರೋಫಿ-2022 ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು.
ದ್ವಾರಕನಗರದಲ್ಲಿ ರಂಜಿತ್ ಕುಮಾರ್ ಅವರ ಸ್ನೇಹಿತರು ಸೇರಿಕೊಂಡು ಸಮಿತಿಯನ್ನು ರಚಿಸಿಕೊಂಡು ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟವನ್ನು ಯಶಸ್ವಿಯಾಗಿ ನಡೆಸಿ ಆ ಮೂಲಕ ಉಳಿಕೆ ಬಂದ 2,95,000 ರೂ. ಅನ್ನು ಕುಟುಂಬಕ್ಕೆ ಹಸ್ತಾಂತರಿಸಿರುವುದು.
ಭಾನುವಾರ ನಡೆದ ಸಹಾಯ ಧನ ಹಸ್ತಾಂತರವನ್ನು ಬದಿಯಡ್ಕ ಠಾಣಾ ಸಬ್ ಇನ್ಸ್ ಫೆಕ್ಟರ್ ವಿನೋದ್ ಕುಮಾರ್ ನಿರ್ವಹಿಸಿದರು. ದಿ. ರಂಜಿತ್ ಕುಮಾರ್ ಹೆತ್ತ್ತವರಾದ ನಾರಾಯಣ ಮಣಿಯಾಣಿ ಹಾಗೂ ಸರೋಜಿನಿ ಸಹಾಯಧನ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಲೋಕೇಶ್ ಕೋಳಾರಿ, ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ಕೋಶಾಕಾರಿ ಕಿರಣ ಕೆ.ಕೆ.ಅಡ್ಕ, ಉದ್ಯಮಿ ಶಿವಶಂಕರ್ ಎನ್.ಬಿ.,ಮಧುಸೂದನ, ಸಮಿತಿಯ ಪದಾದಿಕಾರಿಗಳ ಸದಸ್ಯರು ಉಪಸ್ಥಿತರಿದ್ದರು.




