HEALTH TIPS

ರಾಜ್ಯದಲ್ಲಿ ಇಂದು 558 ಮಂದಿಗೆ ಕೋವಿಡ್ ಪತ್ತೆ

                 ತಿರುವನಂತಪುರ: ರಾಜ್ಯದಲ್ಲಿ ಇಂದು 558 ಮಂದಿಗೆ ಕೋವಿಡ್ ಪತ್ತೆಹಚ್ಚಲಾಗಿದೆ. ಎರ್ನಾಕುಳಂ 119, ಕೊಟ್ಟಾಯಂ 69, ಕೋಝಿಕ್ಕೋಡ್ 61, ತಿರುವನಂತಪುರ 57, ಕೊಲ್ಲಂ 50, ಪತ್ತನಂತಿಟ್ಟ 37, ತ್ರಿಶೂರ್ 37, ಕಣ್ಣೂರು 33, ಇಡುಕ್ಕಿ 30, ಪಾಲಕ್ಕಾಡ್ 18, ಆಲಪ್ಪುಳ 17, ಮಲಪ್ಪುರಂ 12, ಕಾಸರಗೋಡು 9 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

                    ಕಳೆದ 24 ಗಂಟೆಗಳಲ್ಲಿ 21,229 ಮಾದರಿಗಳನ್ನು ಪರೀಕ್ಷಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 15,996 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 17,541 ಮಂದಿ ಮನೆ/ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 469 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 79 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 4802 ಕೊರೋನಾ ಪ್ರಕರಣಗಳಲ್ಲಿ, ಕೇವಲ 10 ಶೇ. ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

              ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿದವರಲ್ಲಿ ಇಬ್ಬರು ಮೃತರಾಗಿದ್ದಾರೆ. ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳ ವಿಳಂಬದಿಂದ 8 ಸಾವುಗಳು ಮತ್ತು ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 64 ಸಾವುಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 67,550ಕ್ಕೆ ಏರಿಕೆಯಾಗಿದೆ.

                ಇಂದು ಸೋಂಕು ದೃಢಪಟ್ಟವರಲ್ಲಿ ಇಂದು ಯಾರೂ ರಾಜ್ಯದ ಹೊರಗಿನವರಿಲ್ಲ. ಸಂಪರ್ಕದಿಂದ 525 ಮಂದಿ ಜನರಿಗೆ ಸೋಂಕು ತಗುಲಿದೆ. 26 ಮಂದಿ ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಏಳು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪತ್ತೆಯಾಗಿದೆ. 

           ಕೋವಿಡ್ ಪತ್ತೆಯಾದವರಲ್ಲಿ ಇಂದು 773 ಮಂದಿ ಜನರು ಗುಣಮುಖರಾಗಿದ್ದಾರೆ.  ತಿರುವನಂತಪುರ 122, ಕೊಲ್ಲಂ 38, ಪತ್ತನಂತಿಟ್ಟ 53, ಆಲಪ್ಪುಳ 5, ಕೊಟ್ಟಾಯಂ 91, ಇಡುಕ್ಕಿ 72, ಎರ್ನಾಕುಳಂ 193, ತ್ರಿಶೂರ್ 62, ಪಾಲಕ್ಕಾಡ್ 5, ಮಲಪ್ಪುರಂ 26, ಕೋಝಿಕ್ಕೋಡ್ 73, ವಯನಾಡ್ 16, ಕಣ್ಣೂರು 13 ಮತ್ತು ಕಾಸರಗೋಡು 4 ಮಂದಿ ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 4802 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 64,56,428 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries