ತಿರುವನಂತಪುರ: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ನಿನ್ನೆ ಚಿನ್ನ ಪ್ರತಿ ಗ್ರಾಂಗೆ 4,735 ರೂ., ಪವನ್ ಗೆ 37,880 ರೂ.ಇತ್ತು. ಆದರೆ, ಪ್ರತಿ ಗ್ರಾಂಗೆ 60 ರೂ., ಪವನ್‍ಗೆ 480 ರೂ.ಗಳಷ್ಟು ಇಂದು ಏರಿಕೆಯಾಗಿದೆ ಎಂದು ವರದಿಯಾಗಿದೆ.
ಇದರೊಂದಿಗೆ ಪವನ್ ಗೆ 38,360 ರೂ.ಗೆ ಏರಿಕೆಯಾಗಿದೆ. ಪ್ರಸ್ತುತ ಬೆಲೆ ಪ್ರತಿ ಗ್ರಾಂಗೆ 4,795 ರೂ.ಇದೆ. ಇದೇ ವೇಳೆ ಪ್ರತಿ 10 ಗ್ರಾಂಗೆ 47,950 ರೂ. ಮತ್ತು 100 ಗ್ರಾಂಗೆ 4,79,500 ರೂ. ಬೆಲೆಯಿದೆ.
ಒಂದು ತಿಂಗಳ ಹಿಂದೆ, ಚಿನ್ನದ ಬೆಲೆ ತೀವ್ರವಾಗಿ ಏರಲು ಪ್ರಾರಂಭಿಸಿತು. ಇದು ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರದ ಬೆಳವಣಿಗೆ ಎನ್ನಲಾಗಿದೆ. ಷೇರುಪೇಟೆಯಲ್ಲಿನ ಬದಲಾವಣೆಯಿಂದ ಚಿನ್ನದ ಬೆಲೆ ಮೇಲೆಯೂ ಪರಿಣಾಮ ಬೀರಿದೆ. ಆರ್ಥಿಕ ತಜ್ಞರ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.


