ತಿರುವನಂತಪುರ: ಥಿಯೇಟರ್‍ಗಳಲ್ಲಿ ಚಿತ್ರ ವೀಕ್ಷಣೆ ಮಾಡುಚವ ವೇಳೆ ಮಕ್ಕಳು ಅಳುವುದು ಎಲ್ಲರಿಗೂ ಆಗುವ ಸಾಮಾನ್ಯ ಅನುಭವ. ಆದರೆ ಈ ಸಮಸ್ಯೆಯು ಇನ್ನು ಮುಂದೆ ಪೋಷಕರಿಗೆ ಕಾಡುವುದಿಲ್ಲ. ಥಿಯೇಟರ್ ನಲ್ಲಿ ಕುಳಿತು ಮಗುವನ್ನು ತೊಟ್ಟಿಲಲ್ಲಿ ಕೂರಿಸಿಕೊಂಡು ಸಿನಿಮಾ ನೋಡಬಹುದು. ಇದಕ್ಕಾಗಿ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ ‘ಕ್ರೈ ರೂಂ’ ಎಂಬ ಯೋಜನೆಯನ್ನು ಸಿದ್ಧಪಡಿಸುತ್ತಿದೆ.
ಥಿಯೇಟರ್‍ನಲ್ಲಿ ಸಿನಿಮಾ ನೋಡುತ್ತಿರುವಾಗ ಮಗು ಅಳುತ್ತಿದ್ದರೆ, ತಾಯಿ ಮತ್ತು ಮಗು ಕ್ರೈ ರೂಮ್ ಗೆ ತೆರಳಿ ಅಲ್ಲಿ ಚಿತ್ರ ವೀಕ್ಷಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯ ಚಲನಚಿತ್ರ ನಿಗಮದ ಅಧೀನದಲ್ಲಿರುವ ಕೈರಳಿ, ನಿಲ ಮತ್ತು ಶ್ರೀ ಚಿತ್ರಮಂದಿರಗಳಲ್ಲಿ ಮೊದಲ ಬಾರಿಗೆ ಈ ರೀತಿಯ ಚಿತ್ರ ಪ್ರದರ್ಶನಗೊಳ್ಳಲಿದೆ. ಇದನ್ನು ಫಿಲಂ ಕಾಪೆರ್Çರೇಷನ್ ಎಂಡಿ ಮಾಯಾ ಪ್ರಕಟಿಸಿದ್ದಾರೆ. ನಿರ್ಮಾಣ ಕಾರ್ಯ ಆರಂಭವಾಗಿದ್ದು, ಶೀಘ್ರವೇ ಕ್ರೈ ರೂಂ ತೆರೆಯಲಾಗುವುದು ಎಂದು ಮಾಯಾ ತಿಳಿಸಿದರು.
ಮಗು ಅಳುವ ಸದ್ದು ಹೊರಗೆ ಕೇಳಿಸದಂತೆ ಕೊಠಡಿ ವಿನ್ಯಾಸ ಮಾಡಲಾಗಿದೆ. ತಾಯಿಯೂ ಕೋಣೆಯಲ್ಲಿ ಗಾಜಿನ ಮೂಲಕ ಚಲನಚಿತ್ರವನ್ನು ಆನಂದಿಸಬಹುದು. ಚಲನಚಿತ್ರ ಅಭಿವೃದ್ಧಿ ನಿಗಮವು ಮಗುವಿನ ಡೈಪರ್ ಬದಲಾಯಿಸಲೂ ಕೊಠಡಿಯಲ್ಲಿ ವ್ಯವಸ್ಥೆಗಳಿರಲಿದೆ. ಸುಮಾರು 12 ಕೋಟಿ ರೂ.ವೆಚ್ಚದಲ್ಲಿ ಕೊಠಡಿ ನಿರ್ಮಾಣವಾಗುತ್ತಿದೆ.

