HEALTH TIPS

ಸಿಬಿಐ ಶೀಘ್ರದಲ್ಲೇ ಇಂಟರ್‌ಪೋಲ್ ಗ್ಲೋಬಲ್ ಅಕಾಡೆಮಿ ನೆಟ್‌ವರ್ಕ್‌ಗೆ ಸೇರಲಿದೆ: ಕೇಂದ್ರ

             ನವದೆಹಲಿ: ಭಾರತದ ಪ್ರಮುಖ ತನಿಖಾ ಸಂಸ್ಥೆ - ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಶೀಘ್ರದಲ್ಲೇ ಇಂಟರ್‌ಪೋಲ್ ಗ್ಲೋಬಲ್ ಅಕಾಡೆಮಿ ನೆಟ್‌ವರ್ಕ್‌ಗೆ ಸೇರಲು ಸಿದ್ಧವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಅನುಮೋದನೆ ಸಹ ನೀಡಿದೆ.

             ಮಂಗಳವಾರ ನಡೆದ ಒಂದು ದಿನದ ಇಂಟರ್‌ಪೋಲ್ ಸಂಪರ್ಕ ಅಧಿಕಾರಿಗಳ (ಐಎಲ್‌ಒ) ಸಮ್ಮೇಳನದಲ್ಲಿ ಇದನ್ನು ದೃಢಪಡಿಸಿದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು, “ಇಂಟರ್‌ಪೋಲ್ ಗ್ಲೋಬಲ್ ಅಕಾಡೆಮಿಗೆ ಸೇರಲು ಕೇಂದ್ರ ಸರ್ಕಾರ ತಾತ್ವಿಕ ಅನುಮೋದನೆಯನ್ನು ನೀಡಿದೆ ಮತ್ತು ಶೀಘ್ರದಲ್ಲೇ ಸಿಬಿಐ ಅಕಾಡೆಮಿ ಸೇರುವ ನಿರೀಕ್ಷೆಯಿದೆ ಎಂದರು.

                  ಇಂಟರ್‌ಪೋಲ್ ಗ್ಲೋಬಲ್ ಅಕಾಡೆಮಿ ನೆಟ್‌ವರ್ಕ್ ಇಂಟರ್‌ಪೋಲ್‌ನ ವಿವಿಧ ವಿಶೇಷ ತರಬೇತಿ ಕೋರ್ಸ್‌ಗಳನ್ನು ಒದಗಿಸುವ ಪ್ರಾದೇಶಿಕ ಕೇಂದ್ರವಾಗಿದೆ.

               ಸಿಬಿಐ ವರ್ಚುವಲ್ ಮೂಲಕ ಆಯೋಜಿಸಿದ್ದ ಈ ಸಮ್ಮೇಳನದಲ್ಲಿ ನ್ಯಾಷನಲ್ ಸೆಂಟ್ರಲ್ ಬ್ಯೂರೋ(ಎನ್‌ಸಿಬಿ) ಮತ್ತು ಇಂಟರ್‌ಪೋಲ್ ಸಂಪರ್ಕ ಅಧಿಕಾರಿಗಳು(ಐಎಲ್‌ಒಗಳು) ಸೇರಿದಂತೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಇತರ ಕಾನೂನು ಜಾರಿ ಸಂಸ್ಥೆಗಳು ಭಾಗವಹಿಸಿದ್ದವು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries