HEALTH TIPS

ಆರಿಕ್ಕಾಡಿ ಟೋಲ್‍ಗೇಟ್ ಅವಶೇಷಗಳಿಂದ ಅಪಘಾತಗಳ ಸರಣಿ; ಟೆಂಪೋ ಡಿಕ್ಕಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

ಕುಂಬಳೆ: ಜನರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಆರಿಕ್ಕಾಡಿ ಟೋಲ್‍ಗೇಟ್‍ನಲ್ಲಿ ಟೋಲ್ ಸಂಗ್ರಹ ಸ್ಥಗಿತಗೊಂಡಿದ್ದರೂ, ಅಲ್ಲಿನ ಡಿವೈಡರ್‍ಗಳು ಹಾಗೂ ಕಾಂಕ್ರೀಟ್ ಅವಶೇಷಗಳು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಟೋಲ್‍ಗೇಟ್‍ನ ಅಡೆತಡೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸದಿರುವುದರಿಂದ ಅಪಘಾತಗಳು ಮುಂದುವರಿಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ಟೋಲ್ ಸಂಗ್ರಹ ನಿಂತುಹೋಗಿದ್ದರೂ, ರಸ್ತೆ ಮಧ್ಯದಲ್ಲಿರುವ ಡಿವೈಡರ್‍ಗಳು ಸೇರಿದಂತೆ ಟೋಲ್‍ಗೇಟ್‍ನ ನಿರ್ಮಾಣ ಅವಶೇಷಗಳನ್ನು ತೆರವುಗೊಳಿಸದಿರುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಈ ಅವಶೇಷಗಳಿಗೆ ವಾಹನಗಳು ಡಿಕ್ಕಿ ಹೊಡೆಯುತ್ತಿರುವ ಘಟನೆಗಳು ಪದೇಪದೇ ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ಟೆಂಪೋ ಡಿಕ್ಕಿ; ಸಂಚಾರಕ್ಕೆ ಅಡ್ಡಿ:

ಅಕ್ಟೋಬರ್ 17ರ ಶನಿವಾರ ಬೆಳಗ್ಗೆಯೂ ಆರಿಕ್ಕಾಡಿ ಟೋಲ್‍ಗೇಟ್ ಬಳಿ ಅಪಘಾತ ಸಂಭವಿಸಿದೆ. ಮಂಗಳೂರಿನಿಂದ ಬರುತ್ತಿದ್ದ ಟೆಂಪೆÇೀವೊಂದು ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿದ್ದ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.

ಅಪಘಾತಕ್ಕೀಡಾದ ಟೆಂಪೆÇೀವನ್ನು ಸ್ಥಳದಿಂದ ತೆರವುಗೊಳಿಸಿದ ಬಳಿಕ ಸಂಚಾರ ವ್ಯವಸ್ಥೆ ಪುನಃ ಸಹಜ ಸ್ಥಿತಿಗೆ ಮರಳಿತು.

ಮುಗಿಯದ ಗೊಂದಲ:

ಜನರ ಭಾರೀ ಆಕ್ರೋಶ ಪ್ರತಿಭಟನೆಯ ಬಳಿಕ ನಿಲುಗಡೆಗೊಂಡ ಕುಂಬಳೆ ಆರಿಕ್ಕಾಡಿ ಟೋಲ್ ಪ್ಲಾಜಾದ ಅವಶಿಷ್ಟಗಳು ಇನ್ನೂ ಅಲ್ಲೇ ಇರುವುದರಿಂದ ಹೆದ್ದಾರಿ ಮೂಲಕ ಆಗಮಿಸುವ ಹೊಸ ಪ್ರಯಾಣಿಕರನ್ನು ಗೊಂದಲಗೊಳಿಸುತ್ತಿದೆ. ಟೋಲ್ ಪ್ಲಾಜಾದ ಬೃಹತ್ ಕಂಬ ಸಹಿತ 'ಕುಂಬಳೆ ಟೋಲ್ ಪ್ಲಾಜಾ' ಎಂಬ ಫಲಕಗಳು ಒಂದಷ್ಟು ಹೊತ್ತು ಹೊಸ ಪ್ರಯಾಣಿಕರನ್ನು ಗೊಂದಲಗೊಳಿಸುತ್ತಿದೆ. ಅವರು ವಾಹನ ನಿಧಾನಗೊಳಿಸಿ ಟೋಲ್ ಗಾಗಿ ಮೇಲೆ-ಕೆಳಗೆ ನೋಡುವುದು, ಈ ವೇಳೆ ಹಿಂಬದಿಯಿಂದ ವೇಗವಾಗಿ ಬರುವ ಇತರ ವಾಹನಗಳೂ ವೇಗ ನಿಯಂತ್ರಿಸಲಾಗದೆ ಗೊಂದಲಕ್ಕೊಳಗಾಗುವುದು, ಅವಘಾತಗಳು ಇವೆಲ್ಲ ಇಲ್ಲಿ ಸಾಮಾನ್ಯ ದೃಶ್ಯವಾಗುತ್ತಿದೆ.  

ಡಿವೈಡರ್ ತೆರವಿಗೆ ಸ್ಥಳೀಯರ ಆಗ್ರಹ:

ಆರಿಕ್ಕಾಡಿ ಟೋಲ್‍ಗೇಟ್‍ನಲ್ಲಿರುವ ಕಾಂಕ್ರೀಟ್ ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕೆಂದು ಸ್ಥಳೀಯರು ಹಲವು ಬಾರಿ ಒತ್ತಾಯಿಸಿದ್ದಾರೆ. ರಸ್ತೆ ಮಧ್ಯದಲ್ಲಿರುವ ಡಿವೈಡರ್‍ಗಳು ಮತ್ತು ಇತರ ಅಡೆತಡೆಗಳಿಂದ ವಾಹನ ಸವಾರರ ಸುರಕ್ಷತೆಗೆ ಅಪಾಯ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಟೋಲ್ ಸಂಗ್ರಹ ಸ್ಥಗಿತಗೊಂಡಿರುವುದರಿಂದ ಟೋಲ್‍ಗೇಟ್‍ನ ಉಳಿದ ನಿರ್ಮಾಣಗಳನ್ನು ತೆರವುಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರು ಹಾಗೂ ಪ್ರಯಾಣಿಕರ ಪ್ರಮುಖ ಬೇಡಿಕೆಯಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ರಸ್ತೆ ಮಧ್ಯದಲ್ಲಿರುವ ಡಿವೈಡರ್‍ಗಳು ಸೇರಿದಂತೆ ಎಲ್ಲ ಅಡೆತಡೆಗಳನ್ನು ತೆರವುಗೊಳಿಸಿ, ಮತ್ತಷ್ಟು ಅಪಘಾತಗಳು ಸಂಭವಿಸದಂತೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries