HEALTH TIPS

ಮೊಬೈಲ್ ಗೇಮ್ ಆಡಿದ್ದಕ್ಕೆ ಗದರಿದ ತಾಯಿ: ಹನ್ನೊಂದು ವರ್ಷದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ: ಮೇಲ್ಪರಂಬದಲ್ಲಿ ಘಟನೆ


      ಕಾಸರಗೋಡು: ಮೊಬೈಲ್ ಗೇಮ್ ಆಡುತ್ತಿದ್ದಕ್ಕೆ ತಾಯಿ ಬೈದಿರುವುದನ್ನು ನೆಪವಾಗಿಸಿ 11 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಗಂಭೀರ ಘಟನೆ ನಡೆದಿದೆ.  ಕಾಸರಗೋಡು ಮೇಲ್ಪರಂಬದ ಕಟಾಂಗೋಡು ನಿವಾಸಿ ಅಬ್ದುಲ್ ರಹ್ಮಾನ್ ಮತ್ತು ಶಾಹಿನಾ ದಂಪತಿಯ ಪುತ್ರಿ ಫಾತಿಮಾ ಅಮ್ನಾ ಆತ್ಮಹತ್ಯೆ ಮಾಡಿಕೊಂಡವಳು.
       ಶಾಲಾ ಪಠ್ಯ ಅಭ್ಯಸಿಸದೆ  ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದ ಮಗುವಿಗೆ ತಾಯಿ ಛೀಮಾರಿ ಹಾಕಿದ್ದರು.  ಮೊಬೈಲನ್ನು ಮತ್ತೆ ಬಳಸುತ್ತಿರುವುದನ್ನು ಕಂಡು ಅದನ್ನು ಎಳೆದು ತೆಗೆದಿರಿಸಿದ್ದರು.ಇದರಿಂದ ಹತಾಶೆಗೊಳಗಾದ ಬಾಲಕಿ  ಕಿಟಕಿಯ ಸರಳಿಗೆ ಶಾಲು ಹೊದ್ದು ಆತ್ಮಹತ್ಯೆಗ್ಯೆದಳೆಂದು ಹೇಳಲಾಗಿದೆ.
         ಕೂಡಲೇ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲಾಗಲಿಲ್ಲ. ಫಾತಿಮಾ ಅಮ್ನಾ ಚಂದ್ರಗಿರಿ ಸರಕಾರಿ ಪ್ರೌಢಶಾಲೆಯಲ್ಲಿ ಐದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.  ಘಟನೆ ಸಂಬಂಧ ಮೇಲ್ಪರಂಬ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries