ಕಾಸರಗೋಡು: ಕೋವಿಡ್ ಸೋಂಕು ಆರಂಭಗೊಂಡ ಬಳಿಕ ಸುಧೀರ್ಘ ಕಾಲದ ನಂತರ ಜಿಲ್ಲೆಯಲ್ಲಿ ನಿನ್ನೆ ಯಾರಿಗೂ ಕೋವಿಡ್ ದೃಢಪಡದೆ ಸಮಾಧಾನಕ್ಕೆ ಕಾರಣವಾಯಿತು. ಇದಕ್ಕೂ ಮೊದಲು, ಮೇ 2020 ರ ವೇಳೆಗೆ ಜಿಲ್ಲೆ ಸಂಪೂರ್ಣವಾಗಿ ಕೋವಿಡ್ ಮುಕ್ತವಾಗಿತ್ತು.
ಕೋವಿಡ್ ಜಿಲ್ಲೆಯಲ್ಲಿ ಮೊದಲ ಬಾರಿಗೆ ಫೆಬ್ರವರಿ 3, 2020 ರಂದು ವರದಿಯಾಗಿತ್ತು. ಚೀನಾ ವುಹಾನ್ ನಿಂದ ಆಗಮಿಸಿದ ವಿದ್ಯಾರ್ಥಿಗೆ ಈ ರೋಗ ಮೊದಲು ದೃಢಪಟ್ಟಿತ್ತು. ಬಳಿಕ ಮಾರ್ಚ್ 16 ರಂದು ವಿದೇಶದಿಂದ ಬಂದ ವ್ಯಕ್ತಿಯಿಂದ ಜಿಲ್ಲೆಯಲ್ಲಿ ರೋಗ ಹರಡಿತು. ಮಾರ್ಚ್ ಕೊನೆಯ ವಾರದಲ್ಲಿ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿತ್ತು.
ಮಂಗಳವಾರ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ಮಂದಿಗೆ ಕೋವಿಡ್ ಪರೀಕ್ಷೆ ನೆಗೆಟಿವ್ ಬಂದಿದೆ. ಸದ್ಯ 29 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸಾವಿನ ಸಂಖ್ಯೆ 1,372 ಆಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 93 ಮಂದಿ ನಿಗಾದಲ್ಲಿದ್ದಾರೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ 284 ಹೊಸ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ (ಆರ್ಟಿ.ಪಿ.ಸಿ.ಆರ್ 112, ಪ್ರತಿಜನಕ 172) ಮತ್ತು 16 ಮಂದಿ ನಿರೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಮತ್ತು ಇತರ ಕೋವಿಡ್ ಕೇರ್ ಸೆಂಟರ್‍ಗಳಿಗೆ ನಿರೀಕ್ಷಣೆಗಾಗಿ ಹೊಸದಾಗಿ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 166503 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 164,973 ಮಂದಿ ಜನರಿಗೆ ನೆಗೆಟಿವ್ ಆಗಿದೆ. ಇಲ್ಲಿಯವರೆಗೆ 62 ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ.
-


