HEALTH TIPS

ಕರ್ನಾಟಕದ ಹಿಜಾಬ್ ವಿವಾದ ಒಂದು ಪಿತೂರಿ- ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

              ಚೆನ್ನೈ: ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಹಿಜಾಬ್ ಅತ್ಯಗತ್ಯ ಎಂದು ಹೇಳುವ ಮೂಲಕ ಮುಸ್ಲಿಂ ಮಹಿಳೆಯರನ್ನು ಅವರ ಮನೆಯೊಳಗೆ ಕೂರಿಸುವಂತೆ ತಳ್ಳುವಂತೆ ಮಾಡುತ್ತದೆ ಎಂದು ಕೇರಳ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

            ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿರುವ ಥಿಂಕ್ ಎಡು ಸಮ್ಮೇಳನದ ಹತ್ತನೇ ಆವೃತಿಯಲ್ಲಿ((ThinkEdu 2022 ) ಇಂದು ಭಾಗವಹಿಸಿ ಮಾತನಾಡಿರುವ ಅವರು, 'ಶಿಕ್ಷಣ: ಗುರುತಿಸುವಿಕೆಗಳಿಗೆ ಬಲಿ'-‘‘Education: Victim of Identities’ ಎಂಬ ವಿಷಯ ಕುರಿತು ಮಾತನಾಡಿದ ಕೇರಳ ರಾಜ್ಯಪಾಲರು, ನಮ್ಮ ಸಮಾಜದಲ್ಲಿ ಹಲವು ಮುಸ್ಲಿಮರು ಕಟ್ಟುಪಾಡುಗಳನ್ನು ಮುರಿದು ದೇಶದ ಭದ್ರತಾ ಪಡೆಯನ್ನು ಸೇರಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಜಾಬ್ ಇಸ್ಲಾಂನಲ್ಲಿ ಅಂತರ್ಗತವಾಗಿದೆ ಎಂದು ಹೇಳುವುದು ಅವರಿಗೆ ಅಪಚಾರವಾಗುತ್ತದೆ. ಇದು ಅವರ ನಂಬಿಕೆಯ ಅಗತ್ಯ ಸಿದ್ಧಾಂತವನ್ನು ಅನುಸರಿಸಲು ಸಾಧ್ಯವಾಗದ ಅಪರಾಧಕ್ಕೆ ಅವರನ್ನು ತಳ್ಳುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.

              ಕರ್ನಾಟಕದಲ್ಲಿ ಇತ್ತೀಚೆಗೆ ಆದ ಹಿಜಾಬ್ ವಿವಾದವನ್ನು ಉಲ್ಲೇಖಿಸಿದ ಅವರು, ಶಿಕ್ಷಣ ಸಂಸ್ಥೆಗಳು ಅವರದ್ದೇ ಆದ ವಸ್ತ್ರ ಸಂಹಿತೆಯನ್ನು ಸೂಚಿಸಬಹುದಾಗಿದ್ದು ಇದು ಹಲವು ವರ್ಷಗಳಿಂದ ಜಾರಿಯಲ್ಲಿದೆ. ಹಿಜಾಬ್ ವಿವಾದವಲ್ಲ, ಇದೊಂದು ಪಿತೂರಿ ಎಂದು ನಾನು ಹೇಳುತ್ತೇನೆ ಎಂದರು.

              ಇಂತಹ ಪಿತೂರಿಗಳು ಮುಸ್ಲಿಂ ಮಹಿಳೆಯರ ವೃತ್ತಿ ಭವಿಷ್ಯವನ್ನು ಸೀಮಿತಗೊಳಿಸಿ ಅವರು ಶಿಕ್ಷಣದ ಮೇಲೆ ಹೊಂದಿರುವ ಆಸಕ್ತಿಯನ್ನು ಸಹ ತಗ್ಗಿಸುತ್ತದೆ ಎಂದರು.

             1986ರಲ್ಲಿ ರಾಜೀವ್ ಗಾಂಧಿ ಸರ್ಕಾರವು ಶಾ ಬಾನೋ ತೀರ್ಪನ್ನು ರದ್ದುಗೊಳಿಸಿದ್ದನ್ನು ಉಲ್ಲೇಖಿಸಿದ ರಾಜ್ಯಪಾಲರು, ಹಿಜಾಬ್ ವಿವಾದವನ್ನು ಮುಂದುವರಿಸುತ್ತಿರುವ ಒಂದು ನಿರ್ದಿಷ್ಟ ವರ್ಗವು ಪ್ರಸ್ತುತ ಸರ್ಕಾರದೊಂದಿಗೆ ಅದೇ ರೀತಿಯ ಪ್ರಭಾವವನ್ನು ಅನುಭವಿಸಲು ಸಾಧ್ಯವಾಗದ ಕಾರಣ ಆತಂಕಕ್ಕೊಳಗಾಗಿದೆ ಎಂದು ಹೇಳಿದರು. 2019 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ತ್ರಿವಳಿ ತಲಾಖ್ ಕಾನೂನೊಂದಿಗೆ, ವಿಚ್ಛೇದನ ದರಗಳಲ್ಲಿ ಶೇಕಡಾ 90ರಷ್ಟು ಕಡಿಮೆಯಾಗಿದ್ದು, ಅಮೂಲಾಗ್ರ ಬದಲಾವಣೆಯಾಗಿದೆ ಎಂದರು.

           ಪ್ರಪಂಚದಾದ್ಯಂತದ ನಾಗರಿಕತೆಗಳನ್ನು ನೋಡಿದರೆ, ಪ್ರತಿಯೊಂದು ನಾಗರಿಕತೆಯನ್ನು ನಿರ್ದಿಷ್ಟವಾಗಿ ಮಧ್ಯಕಾಲೀನ ಕಾಲದಲ್ಲಿ ಜನಾಂಗ ಅಥವಾ ಭಾಷೆ ಅಥವಾ ಧಾರ್ಮಿಕ ನಂಬಿಕೆಯಿಂದ ವ್ಯಾಖ್ಯಾನಿಸಲಾಗಿದೆ. ಇದು ಅಲ್ಪಸಂಖ್ಯಾತರನ್ನು ಹೊರಗಿಡಲು ಕಾರಣವಾಗುತ್ತದೆ ನಾವು ಎಲ್ಲಾ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಹೊಂದಿದ್ದೇವೆ ಎಂದು ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

             ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮಾತನಾಡಿದ ಅವರು, ನೀತಿಯು ನಮ್ಮ ಶಿಕ್ಷಣ ಸಂಸ್ಥೆಗಳನ್ನು ಭಾರತೀಯ ಜ್ಞಾನ ಪರಂಪರೆಯನ್ನು ಉತ್ತೇಜಿಸುವ ಸಂಸ್ಥೆಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು.

             ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲ ಮಾತನಾಡಿ, ಕೇರಳ ರಾಜ್ಯಪಾಲ ಅರಿಫ್ ಅವರು ವಿವಿಧತೆಯಲ್ಲಿ ಏಕತೆಯನ್ನು ನಂಬುತ್ತಾರೆ. ಅವರು ರಾಜಕೀಯ ಗವರ್ನರ್ ಆದರೂ ಜನರ ಮನವೊಲಿಸುವ ಗವರ್ನರ್. ತಜ್ಞರೂ ಹೌದು ಎಂದು ಶ್ಲಾಘಿಸಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries