HEALTH TIPS

ಕಳ್ಳರ ಭಯದಿಂದ ಮನೆ ಮುಂಭಾಗ ಚಿನ್ನಾಭರಣ ಹೂತಿಟ್ಟು ಊರಿಗೋದ ಮಹಿಳೆ: ನಂತರ ನಡೆದಿದ್ದು ವಿಚಿತ್ರ!

           ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ಕಳ್ಳರ ಭಯದಿಂದ ತನ್ನ ಬಳಿ ಇದ್ದ 20 ಸವರನ್​ ಚಿನ್ನಾಭರಣಗಳನ್ನು ಮನೆಯ ಮುಂದಿನ ಆವರಣದಲ್ಲಿ ಹೂತಿಟ್ಟಿದ್ದ ಮಹಿಳೆ, ನಂತರದ ದಿನಗಳಲ್ಲಿ ಹೂತಿಟ್ಟ ಜಾಗವನ್ನು ಮರೆತು ಕಂಗಾಲಾಗಿ, ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪ್ರಕರಣ ಬೆಳಕಿಗೆ ಬಂದಿದೆ.

          ಕೇರಳದ ಕೊಲ್ಲಂ ಜಿಲ್ಲೆಯ ಓಚಿರ ಚಂಗನಕುಲಂಗರದ ನಿವಾಸಿ 65 ವರ್ಷದ ಅಜಿತಾ ಕುಮಾರಿ ಅವರು ಕಳ್ಳರ ಭಯದಿಂದ ಕಳೆದ ಅಕ್ಟೋಬರ್‌ನಲ್ಲಿ 20 ಸವರನ್​ ಚಿನ್ನಾಭರಣ, 15 ಸಾವಿರ ರೂ. ನಗದು, ದಾಖಲೆ ಪತ್ರಗಳು ಹಾಗೂ ಗುರುತಿನ ಚೀಟಿಗಳನ್ನು ಹೂತಿಟ್ಟಿದ್ದರು. ತನ್ನ ಸಂಬಂಧಿಕರ ಊರಿಗೆ ಹೋಗುವ ಮುನ್ನ ಮನೆಯ ಆವರಣದಲ್ಲಿ ಹಳ್ಳ ತೋಡಿ ಹೂತಿಟ್ಟಿದ್ದರು. ಇದಾದ ಬಳಿಕ ಅಜಿತಾ ಕುಮಾರಿ ಮತ್ತು ಅವರ ಪತಿ ರಾಮವರ್ಮ ತಂಪುರನ್ ಸಂಬಂಧಿಕರ ಮನೆಯಿಂದ ಹಿಂತಿರುಗಿದರು. ಊರಿನಿಂದ ಮನೆಗೆ ಬಂದ ದಂಪತಿಗೆ ಕೋವಿಡ್ -19 ಸೋಂಕು ತಗುಲಿತು. ಅದರ ಆರೈಕೆಯಲ್ಲಿದ್ದ ಅಜಿತಾ ಅವರು ಚಿನ್ನಾಭರಣ ಹೂತಿಟ್ಟ ಸಂಗತಿಯನ್ನೇ ಮರೆತು ಬಿಟ್ಟಿದ್ದರು. ಕೊನೆಗೆ ಹೂತಿಟ್ಟ ವಿಚಾರ ನೆನಪಾದಾಗ ಇನ್ನೊಂದು ಟ್ವಿಸ್ಟ್​ ಎದುರಾಗಿತ್ತು. ಅದೇನೆಂದರೆ ಯಾವ ಜಾಗದಲ್ಲಿ ಊತಿಟ್ಟಿದ್ದೆ ಎಂಬುದೇ ಅಜಿತಾರಿಗೆ ತಿಳಿಯಲಿಲ್ಲ.

             ಈ ವಿಚಾರವನ್ನು ಪೊಲೀಸರಿಗೆ ತಿಳಿಸುವ ಮೊದಲು, ದಂಪತಿ ತಮ್ಮ ಮನೆಯ ಆವರಣದಲ್ಲಿ ವಿವಿಧ ಸ್ಥಳಗಳನ್ನು ಅಗೆದು ನೋಡಿದರೂ ಯಾವುದೇ ವಸ್ತುಗಳು ಪತ್ತೆಯಾಗಲಿಲ್ಲ. ನೆರೆ ಮನೆಯವರಿಗೆ ಗೊತ್ತಾದರೆ ಅವಮಾನ ಆಗಬಹುದು ಅಂತಾ ಸುಮ್ಮನಾಗಿದ್ದರು. ಆದರೆ, ಒಮ್ಮೆ ವಾರ್ಡ್ ಸದಸ್ಯರಿಗೆ ಈ ವಿಷಯ ತಿಳಿಸಿದ್ದಾರೆ. ಅವರು ದಂಪತಿ ಜತೆ ಪೊಲೀಸ್ ಠಾಣೆ ತೆರಳಿ ದೂರು ದಾಖಲಿಸಿದರು ಮತ್ತು ಪೊಲೀಸರು ಅಂತಿಮವಾಗಿ ಮನೆಯ ಆವರಣದಲ್ಲಿ ಹೂತಿಟ್ಟ ವಸ್ತುಗಳನ್ನು ಪತ್ತೆ ಮಾಡಿ ಹೊರತೆಗೆದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries