ತಿರುವನಂತಪುರ: ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಕೆ ರೈಲು ಸಮಸ್ಯೆಗೆ ರಾಜ್ಯಪಾಲರು ಪ್ರತಿಕ್ರಿಯೆ ನೀಡಿ ಮಾತನಾಡಿದರು. ಪ್ರತಿಭಟನಾಕಾರರನ್ನು ದಮನ ಮಾಡದೆ ಜಾಗೃತಿ ಮೂಡಿಸಲು ಅಥವಾ ಅವರ ಅಗತ್ಯಗಳನ್ನು ಪರಿಗಣಿಸಲು ಸರ್ಕಾರ ಪ್ರಯತ್ನಿಸಬೇಕು ಎಂದರು.
ಕೆ ರೈಲ್ ತನ್ನ ಪರಿಗಣನೆಗೆ ಬಂದಾಗ ಮಾತನಾಡುವೆ. ಹೊರತು ಈ ವಿಷಯದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಸಾಂವಿಧಾನಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದೂ ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ.
ತನ್ನನ್ನು ಭೇಟಿಯಾಗಕು ಕೇರಳ ಕಲಾಮಂಡಲಂನ ಉಪಕುಲಪತಿಗಳು ಏಕೆ ಬರಲಿಲ್ಲ ಎಂಬುದು ತಿಳಿದಿಲ್ಲ. ಕಾನೂನು ಕಾನೂನಿನ ದಿಕ್ಕಿನತ್ತ ಸಾಗುತ್ತದೆ ಎಂಬುದು ಸತ್ಯ ಎಂದು ತಿಳಿಸಿದರು.
ಕೆ ರೈಲ್ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಎಲ್ಲೆಲ್ಲಿ ಅಧಿಕಾರಿಗಳು ಸರ್ವೆ ಕಲ್ಲು ಹಾಕಲು ಬಂದರೂ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವೆಡೆ ಸರ್ವೆ ಕಲ್ಲು ಕಿತ್ತೆಸೆಯಲಾಗಿದೆ. ಇದೇ ವೇಳೆ ಕೆ.ರೈಲು ವಿಚಾರವನ್ನು ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ಸಿಪಿಎಂ ಅಭಿಪ್ರಾಯಪಟ್ಟಿದೆ. ಇದಕ್ಕಾಗಿ ಸಿಪಿಎಂ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದೆ ಎಂದು ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದರು.




