ಪತ್ತನಂತಿಟ್ಟ: ತಿರುವಾಂಕೂರು ದೇವಸ್ವಂ ಮಂಡಳಿಯು ವಿಷು ಪರ್ವದ ದಿನದಿಂದ ಶಬರಿಮಲೆಯ ಸೇವೆಗಳಿಗೆ ಕಾಣಿಕೆ ದರವನ್ನು ತೀವ್ರವಾಗಿ ಹೆಚ್ಚಿಸಲಿದೆ. ಶಬರಿಮಲೆಯಲ್ಲಿ ರುಚಿಕರವಾದ ಅಪ್ಪ ಮತ್ತು ಅರವಣ ಪ್ರಸಾದಗಳಿಗೆ ದೊಡ್ಡ ಹೆಚ್ಚಳವಾಗಲಿದೆ. ಪ್ರಸ್ತುತ 80 ರೂ.ಗಳಿರುವ ಟಿನ್ ಅರವಣ 100 ರೂ. ಮತ್ತು ಏಳು ಅಪ್ಪಗಳ ಪ್ಯಾಕ್ ಗೆ ಬೆಲೆ ರೂ.40 ರೂ.ಗಳಾಗಲಿವೆ.
ಶಬರಿಮಲೆಗೆ ಭೇಟಿ ನೀಡುವ ಇತರ ರಾಜ್ಯಗಳ ಭಕ್ತರು ಅಪ್ಪ ಮತ್ತು ಅರವಣವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ. ಒಮ್ಮೆಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಲೆ ಹೆಚ್ಚಳವಾದರೆ ಭಕ್ತರಿಗೂ ತೊಂದರೆಯಾಗುತ್ತದೆ. ಇತರ ಸೇವೇಗಳ ದರದಲ್ಲೂ ಭಾರಿ ಏರಿಕೆಯಾಗಲಿದೆ. ಸದ್ಯ ಅಷ್ಟಾಭಿಷೇಕ ನೈವೇದ್ಯಕ್ಕೆ 5000 ರೂ. ಇದ್ದು ಹೊಸ ದರಗಳ ಪ್ರಕಾರ 6,000 ರೂ.ಆಗಲಿದೆ.
ಹೂವಿನ ಅಭಿಷೇಕದ ಮೊತ್ತವನ್ನು 10 ಸಾವಿರದಿಂದ 12,500 ರೂ.ಗೆ ಹೆಚ್ಚಿಸಲಾಗಿದೆ. ಹೂವು ಪೂರೈಕೆದಾರರಿಗೆ 7000 ರೂಪಾಯಿಯಿಂದ 7500 ರೂಪಾಯಿಗೆ ಹೆಚ್ಚಿಸಲಾಗಿದೆ. ದೇವಸ್ವಂ ಬೋರ್ಡ್ ಪ್ರಕಾರ, ಗುತ್ತಿಗೆ ವಸ್ತುಗಳ ಬೆಲೆಗಳು, ಗುತ್ತಿಗೆ ದರಗಳು ಮತ್ತು ವೇತನ ಹೆಚ್ಚಳದಿಂದಾಗಿ ಹೆಚ್ಚಳ ಮಾಡಬೇಕಾಗಿದೆ ಎನ್ನುತ್ತಾರೆ. ದರ ಏರಿಕೆಗೆ ಹೈಕೋರ್ಟ್ ಅನುಮೋದನೆ ನೀಡಿದೆ ಎಂದೂ ಮಂಡಳಿ ತಿಳಿಸಿದೆ. ಪಂಪಾ ದೇವಸ್ವಂನ ಕಾಣಿಕೆ ದರವನ್ನೂ ಹೆಚ್ಚಿಸಲಾಗಿದೆ.

