ಕಾಸರಗೋಡು|: ವೈಜ್ಞಾನಿಕ ಸಂಶೋಧನೆಗಾಗಿ ಕಾಸರಗೋಡು ಸರ್ಕಾರಿ ಕಾಲೇಜಿಗೆ 1.8 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವ ಆರ್.ಬಿಂದು ತಿಳಿಸಿದ್ದಾರೆ.
ಅವರು 22ನೇ ಕಣ್ಣೂರು ವಿಶ್ವವಿದ್ಯಾನಿಲಯ ಯೂನಿಯನ್ ಕಲೋತ್ಸವದ ವೇದಿಕೆ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ವೈವಿಧ್ಯತೆಯೇ ನಮ್ಮ ಸಂಪತ್ತು ಮತ್ತು ಶಕ್ತಿಯಾಗಿದೆ. ಕಲಾ ಮೇಳಗಳ ಮೂಲಕ ಕೇರಳದ ಸಂಸ್ಕøತಿ, ಕಲೆಯ ಸೃಜನಶೀಲ ಸಾಮಥ್ರ್ಯವನ್ನು ಬಿಂಬಿಸುವಂತಾಗಲಿ ಎಂದು ತಿಳಿಸಿದರು.
ಸಮಾರಂಭದಲ್ಲಿ ಎನ್.ಎ. ನೆಲ್ಲಿಕುನ್ನು ಶಾಸಕ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ವಿಶ್ವವಿದ್ಯಾಲಯ ಪೆÇ್ರ ವೈಸ್ ಚಾನ್ಸೆಲರ್ ಡಾ. ಸಾಬು ಅಬ್ದುಲ್ ಹಮೀದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಣ್ಣೂರುವಿಶ್ವವಿದ್ಯಾನಿಲಯ ಒಕ್ಕೂಟದ ಅಧ್ಯಕ್ಷ ವಕೀಲ ಎಂ.ಕೆ.ಹಸನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಡಾ.ಅರುಣಕುಮಾರ್, ಚಿತ್ರನಟಿ ಮರೀನಾ ಮೈಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಸಕರಾದ ಸಿ.ಎಚ್.ಕುಂಞಂಬು, ಎ.ಕೆ.ಎಂ.ಅಶ್ರಫ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ. ಮಣಿಕಂದನ್, ಸಿಂಡಿಕೇಟ್ ಸದಸ್ಯರಾದ ಡಾ.ಎ.ಅಶೋಕನ್, ಎಂ.ಸಿ.ರಾಜು, ಡಾ.ರಾಖಿ ರಾಘವನ್, ಡಾ.ಕೆ.ಟಿ.ಚಂದ್ರಮೋಹನನ್, ಡಾ.ಟಿ.ಪಿ.ಅಶ್ರಫ್, ಕೆ.ವಿ.ಪ್ರಮೋದ್ ಕುಮಾರ್, ಕಣ್ಣೂರು ವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕಿ ಟಿ.ಪಿ.ನಫೀಸಾ ಬೇಬಿ, ಕಣ್ಣೂರು ವಿವಿ ಯೂನಿಯನ್ ಪ್ರಧಾನ ಕಾರ್ಯದರ್ಶಿ ಕೆ.ವಿ.ಶಿಲ್ಪಾ, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಕೆ.ಹರಿಕುರುಪ್, ಸೆನೆಟ್ ಸದಸ್ಯರಾದ ಡಾ. ಕೆ.ವಿಜಯನ್, ಡಾ.ಕೆ.ಎಸ್.ಸುರೇಶ್ ಕುಮಾರ್, ಕಾರ್ಯಕ್ರಮ ಸಮಿತಿಅಧ್ಯಕ್ಷ ಆಸಿಫ್ ಇಕ್ಬಾಲ್ ಕಕ್ಕಶ್ಸೆರಿ, ಪಿಟಿಎ ಉಪಾಧ್ಯಕ್ಷ ಅರ್ಜುನನ್ ತಾಯಿಲಂಗಡಿ ಮುಂತಾದವರು ಉಪಸ್ಥಿತರಿದ್ದರು.. ಸಂಘಟನಾ ಸಮಿತಿ ಸಂಚಾಲಕಅಲ್ಬಿನ್ ಮ್ಯಾಥ್ಯೂ ಸ್ವಾಗತಿಸಿ, ಕಣ್ಣೂರು ವಿಶ್ವವಿದ್ಯಾನಿಲಯ ಒಕ್ಕೂಟದ ಕಾರ್ಯಕಾರಿಣಿ ಕಾಸರಗೋಡು ಜಿಲ್ಲಾ ಬಿ.ಕೆ.ಶೈಜಿನಾ ವಂದಿಸಿದರು.
ಕಲೋತ್ಸವದ ಸಂದರ್ಭದ ಸ್ಮರಣ ಸಂಚಿಕೆಯನ್ನು ಸಚಿವೆ ಆರ್. ಬಿಂದು ಬಿಡುಗಡೆ ಮಾಡಿದರು. 120 ಸ್ಪರ್ಧೆಗಳಲ್ಲಿ ಕಣ್ಣೂರು, ಕಾಸರಗೋಡು ಮತ್ತು ವಯನಾಡು ಜಿಲ್ಲೆಗಳ 140 ಕಾಲೇಜುಗಳಿಂದ 5000 ವಿದ್ಯಾರ್ಥಿಗಳು ಕಲಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.




