HEALTH TIPS

ಭೂಮಿ ಸಂಬಂಧ ದೂರುಗಳಿಗೆ ತಕ್ಷಣ ಪರಿಹಾರಕ್ಕಾಗಿ ಜನಪರ ಸಮಿತಿ ರಚನೆ: ಸಚಿವ

              ಕಾಸರಗೋಡು: ಗ್ರಾಮಾಧಿಕಾರಿಗಳ ಕೆಲಸಕಾರ್ಯಗಳಲ್ಲಿ ಕಾರ್ಯಕ್ರಮತೆ ಹೆಚ್ಚಿಸಲು ಹಾಗೂ ಕೆಲಸಗಳನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಜನಪರ ಸಮಿತಿಯನ್ನು ಸಕ್ರಿಯಗೊಳಿಸಲಾಗುವುದು ಎಂದು ಕಂದಾಯ ಖಾತೆ ಸಚಿವ ಕೆ.ರಾಜನ್ ತಿಳಿಸಿದ್ದಾರೆ.

           ಅವರು ಕಾಸರಗೋಡು ಜಿಲ್ಲೆಯ ಕಂದಾಯ ವಿಭಾಗದಲ್ಲಿ ಇಂತಹ ಕಾರ್ಯಕ್ರಮಗಳ ಅವಲೋಕನಾ ಸಭೆಯಲ್ಲಿ ಮಾತನಾಡಿದರು. ಇಂತಹ ಸಮಿತಿಯಿಂದ ಭೂಮಿಗೆ ಸಂಬಂಧಿಸಿದ ದೂರು, ಸವಲತ್ತುಗಳ ಕುರಿತು ತುರ್ತು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಗ್ರಾಮಾಧಿಕಾರಿಗಳು ಆಯಾ ಗ್ರಾಮದ ಜನಪರ ಸಮಿತಿ ಸಂಚಾಲಕರು ಹಾಗೂ ಜನಪ್ರತಿನಿಧಿಗಳು ಸಮಿತಿಯ ಸದಸ್ಯರಾಗಿರುತ್ತಾರೆ. ಪ್ರತಿ ತಿಂಗಳ ಮೂರನೇ ಶನಿವಾರ ಸಭೆ ಸೇರಿ, ಕಾರ್ಯಚಟುವಟಿಕೆಗಳ ಬಗ್ಗೆ ಅವಲೋಕನ ನಡೆಸಿ, ಮುಂದಿನ ಕಾರ್ಯಯೋಜನೆಗಳನ್ನು ಆಯೋಜಿಸಬೇಕು. ಗ್ರಾಮಗಳ ಜನಪರ ಸಮಿತಿ ರಚಿಸಲು ಹಾಗೂ ಕಾರ್ಯಕ್ರಮ ಸಂಯೋಜಿಸಲಿರುವ ಅಧಿಕಾರ ಆಯಾ ತಾಲೂಕಿನ ತಹಸೀಲ್ದಾರರದ್ದಾಗಿರುತ್ತದೆ.ಈ ಬಗ್ಗೆ ದೂರುಗಳಿದ್ದಲ್ಲಿ ಟೋಲ್‍ಫ್ರೀ ಸಂಖ್ಯೆಗೆ ಕರೆಮಾಡಿ ದೂರುಗಳ ಬಗ್ಗೆ ತಕ್ಷಣ ತೀರ್ಪು ನೀಡುವುದಕ್ಕಾಗಿ ಗ್ರೀನ್ ಚಾನೆಲ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದೂ ತಿಳಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries