HEALTH TIPS

ಅಂತರರಾಷ್ಟ್ರೀಯ ಮಹಿಳಾ ದಿನ: ತುಂಬಾ ವಿಶೇಷ ಅರ್ಥದ ಚಿತ್ರಗಳಲ್ಲಿ ಶುಭ ಕೋರಿದೆ ಗೂಗಲ್

 ಮಾರ್ಚ್ 8, ಅಂತರರಾಷ್ಟ್ರೀಯ ಮಹಿಳಾ ದಿನ... ಎಲ್ಲಾ ವಿಷಯಗಳಲ್ಲಿ ಗಂಡಿಗಿಂತ ಹೆಣ್ಣು ಕಡಿಮೆಯಿಲ್ಲದಿದ್ದರೂ ಅವಳಿಗೆ ಸಿಗುವ ಮನ್ನಣೆ ಕಡಿಮೆ. ಹೆಣ್ಣಿನ ಮೌಲ್ಯ, ಗೌರವವನ್ನು ಎತ್ತಿ ಹಿಡಿಯಲು ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ.

ಇಂದು ಮಹಿಳೆ ಎಲ್ಲಾ ಸ್ತರಗಳಲ್ಲೂ ಗುರುತಿಸಿಕೊಂಡಿದೆ. ಹೆಣ್ಣಿಗೆ ಸಾಧ್ಯವೇ ಇಲ್ಲ ಎಂದು ಎಷ್ಟೋ ಕ್ಷೇತ್ರಗಳಿಂದ ಹೆಣ್ಣನ್ನು ದೂರವಿಡಲಾಗಿತ್ತು, ಆದರೆ ಇಂದು ಅವಳು ತನ್ನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ದುಡಿಯುವ ಶಕ್ತಿಯಿದೆ ಎಂಬುವುದನ್ನು ತೋರಿಸಿದ್ದಾಳೆ. ಅವಳು ಮನಸ್ಸು ಮಾಡಿದರೆ ಯಾವುದು ಅಸಾಧ್ಯವೆಂಬುವುದೇ ಇಲ್ಲ, ಆದರೆ ವಳ ಸಾಧನೆಗೆ ಇಂದಿಗೂ ಅನೇಕ ಅಡೆತಡೆಗಳಿವೆ. ಎಷ್ಟೋ ಹೆಣ್ಣು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಬೆಂಬಲ ಸಿಗದೆ ಅವಳ ಸಾಮಾರ್ಥ್ಯ, ಪ್ರತಿಭೆ ಎಲ್ಲವೂ ಮುದುಡಿ ಹೋಗುತ್ತಿದೆ.

ಇನ್ನು ಕೆಲ ಹೆಣ್ಣು ಮಕ್ಕಳು ಎಲ್ಲಾ ಅಡೆತಡೆಗಳನ್ನು ಮೀರಿ ಬೆಳೆಯುತ್ತಿದ್ದಾರೆ. ಮನೆಯಲ್ಲಿ ತೊಟ್ಟಿಲು ಆಡಿಸುವುದರ ಜೊತೆಗೆ ಕೆಲಸವನ್ನೂ ಮಾಡುತ್ತಿದ್ದಾಳೆ. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು, ಮನೆಗೆಲಸ, ಆಫೀಸ್‌ ಕೆಲಸ ಎಲ್ಲವನ್ನೂ ಒಬ್ಬಂಟಿಯಾಗಿ ಸಮರ್ಥಳಾಗಿ ನಿಭಾಯಿಸುತ್ತಿದ್ದಾಳೆ.

ಮಹಿಳಾ ದಿನದ ವಿಶೇಷವಾಗಿ ಗೂಗಲ್‌ ಕೂಡ ಮಹಿಳೆಯರಿಗೆ ತುಂಬಾನೇ ವಿಶೇಷವಾಗಿ ಶುಭಾಶಯ ಹೇಳಿದೆ. ತುಂಬಾನೇ ವಿಶಿಷ್ಟವಾಗಿ ಗೂಗಲ್ ಡೂಡೆಲ್ ಮಾಡಿದ್ದು ಒಂದೊಂದು ಫೋಟೋ ಮಹಿಳೆಯ ಬಗ್ಗೆ ಸಾಕಷ್ಟು ಹೇಳುವಂತಿದೆ. ಮನೆಯಲ್ಲಿ, ಹೊರಗಡೆ ದುಡಿಯುವ ಮಹಿಳೆಯಾಗಿ ಗುರುತಿಸಿಕೊಮಡಿರುವ ಮಹಿಳೆಯನ್ನು ತುಂಬಾ ಸುಂದರವಾಗಿ ವರ್ಣಿಸಲಾಗಿದೆ.

ಮಹಿಳೆ ಎಂಬುವುದು ಒಂದು ಶಕ್ತಿ, ಸ್ಪೂರ್ತಿ.... ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು.........





Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries