HEALTH TIPS

ಮುಸ್ಲಿಮರು ಹಿಂದೂಗಳ ಜನಸಂಖ್ಯೆಯನ್ನು ಮೀರಲಿದ್ದಾರೆ ಅನ್ನುವುದು ʼಕಟ್ಟುಕತೆʼ: ಮಾಜಿ ಮುಖ್ಯ ಚುನಾವಣಾ ಆಯುಕ್ತ

                      ನವದೆಹಲಿ:'ಹಲವು ವರ್ಷಗಳಿಂದ ದೇಶದಲ್ಲಿ ಮುಸ್ಲಿಮರ ಓಲೈಕೆಯಿತ್ತು ಎಂಬ ವಾದವು ಒಂದು 'ಭ್ರಮೆ'ಯಾಗಿದೆ, ಹೆಚ್ಚುತ್ತಿರುವ ಧ್ರುವೀಕರಣದಿಂದ ಎಲ್ಲಾ ಪಕ್ಷಗಳು ಈ 'ಸಮುದಾಯʼವನ್ನು ಕೈಬಿಡುವಂತೆ ತೋರುತ್ತಿದೆ,'' ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಹೇಳಿದ್ದಾರೆ.

                ಮುಸ್ಲಿಮರ ಓಲೈಕೆ ಎಂಬ ಭ್ರಮೆಯನ್ನು 1980 ಹಾಗೂ 1990ರ ದಶಕಗಳಲ್ಲಿ ಸೃಷ್ಟಿಸಲಾಗಿತ್ತು, ಈ ಸಮುದಾಯವು ಜನಸಂಖ್ಯೆಯ ಶೇ 14 ಕ್ಕಿಂತ ಹೆಚ್ಚಿದ್ದರೂ, ನಾಗರಿಕ ಸೇವೆಗಳು ಮತ್ತು ಸರಕಾರಿ ಕೇಡರ್ ಗಳಲ್ಲಿ ಪ್ರಾತಿನಿಧ್ಯ ಕೇವಲ ಶೇ 2 ರಿಂದ ಶೇ 3 ರಷ್ಟಿತ್ತು. ಆದರೂ ಧ್ರುವೀಕರಣವನ್ನು ಹೆಚ್ಚಿಸಲು ಈ ರೀತಿ ಮಾಡಲಾಗಿತ್ತು'' ಎಂದು ಅವರು ಹೇಳಿದರು.

           ಕಳೆದ ಹಲವಾರು ವರ್ಷಗಳಿಂದ ಮುಸ್ಲಿಮರ ಓಲೈಕೆ ಎಂಬ ಮಾತುಗಳು ಭ್ರಮೆ ಹಾಗೂ ಸೃಷ್ಟಿಸಲಾದ ಅಭಿಪ್ರಾಯವಾಗಿತ್ತು ಹಾಗೂ ಇದು ತಮ್ಮ ಉದ್ಯೋಗಗಳನ್ನು ಸೆಳೆಯಲಾಗುತ್ತಿದೆ ಎಂಬ ಅಭಿಪ್ರಾಯವನ್ನು ಮುಸ್ಲಿಮೇತರರಲ್ಲಿ ಮೂಡಿಸಿತ್ತು ಎಂದು ಅವರು ಹೇಳಿದರು.

            ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಮುಸ್ಲಿಮರ ವಿರುದ್ಧದ ದ್ವೇಷದ ಭಾಷಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ''ಇದನ್ನು (ದ್ವೇಷದ ಭಾಷಣ) ಸಹಿಸಬಾರದು, ನಮ್ಮಲ್ಲಿ ಇದರ ವಿರುದ್ಧ ಸಾಕಷ್ಟು ಕಾನೂನುಗಳಿವೆ, ಆದರೆ ಜಾರಿಯ ಪ್ರಶ್ನೆಯಿದೆ, ಆದರೆ ಈ ನಿಟ್ಟಿನಲ್ಲಿ ನಿರ್ವಹಣೆ ಕಳಪೆಯಾಗಿದೆ,''ಎಂದು ಅವರು ಹೇಳಿದರು.

             "ಧ್ರುವೀಕರಣದ ವಾತಾವರಣದಿಂದಾಗಿ ರಾಜಕೀಯ ಪಕ್ಷಗಳು ಮುಸ್ಲಿಮರನ್ನು ತಲುಪಲು ಬಹಳಷ್ಟು ಶ್ರಮ ಪಡದೇ ಇರುವುದು ಒಂದು ತಾತ್ಕಾಲಿಕ ಬೆಳವಣಿಗೆಯಾಗಿದೆ. ಧ್ರುವೀಕರಣದಿಂದ ಹೀಗಾಗಿದೆ, ಮುಸ್ಲಿಮರ ಬಗ್ಗೆ ಮೃದು ನಿಲುವು ತಾಳಿದರೆ ಹಿಂದುಗಳು ಅತ್ತ ಕಡೆಗೆ ಹೋಗಬಹುದು ಎಂಬ ಭಯ ಅವುಗಳಿಗಿದೆ," ಎಂದು ಖುರೇಷಿ ಹೇಳಿದರು.

             ಅಲ್ಲದೆ, ಭಾರತದಲ್ಲಿ ಮುಂದೊಂದು ಮುಸ್ಲಿಂ ಜನಸಂಖ್ಯೆಯು ಹಿಂದೂ ಜನಸಂಖ್ಯೆಯನ್ನು ಮೀರುತ್ತದೆ ಎಂಬ ವಾದವನ್ನೂ ಕುರೇಶಿ ತಳ್ಳಿ ಹಾಕಿದ್ದಾರೆ. ಕುಟುಂಬ ಯೋಜನೆ ಪರಿಕಲ್ಪನೆ ಇಸ್ಲಾಂ ವಿರೋಧೀ ಅಲ್ಲ ಎಂದು ಒತ್ತಿ ಹೇಳಿದ ಕುರೇಶಿ, ಮುಸ್ಲಿಮರ ಬಗ್ಗೆ ದೇಶದಲ್ಲಿ ಮಿಥ್ಯೆಗಳನ್ನು ಸೃಷ್ಟಿಸಲಾಗಿದೆ, ಇದು ಅಲ್ಪಸಂಖ್ಯಾತ ಗುಂಪಿನ ವಿರುದ್ಧ ಹಿಂದೂಗಳಲ್ಲಿ ದ್ವೇಷಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

             ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯು ದೇಶದಲ್ಲಿ ಜನಸಂಖ್ಯಾ ಸಮತೋಲನವನ್ನು ಹಾಳುಮಾಡುತ್ತಿದೆ ಎಂಬ ಸಿದ್ಧಾಂತವನ್ನು ನಿರಾಕರಿಸಿದ ಅವರು, ಭಾರತದ ಜನಸಂಖ್ಯಾ ಅನುಪಾತವು ಮುಸ್ಲಿಮರಲ್ಲಿ 1951 ರಲ್ಲಿ ಶೇಕಡಾ 9.8 ರಿಂದ 2011 ರಲ್ಲಿ ಶೇಕಡಾ 14.2 ಕ್ಕೆ ಏರಿಕೆಯಾಗಿದೆ ಮತ್ತು ಹಿಂದೂ ಜನಸಂಖ್ಯೆಯಲ್ಲಿ ಶೇಕಡಾ 84.2 ರಿಂದ ಶೇಕಡಾ 79.8 ಕ್ಕೆ ಇಳಿಕೆಯಾಗಿದೆ ಎಂದು ತೋರಿಸುತ್ತದೆ, ಅಂದರೆ, 60 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ಕೇವಲ 4.4 ಶೇಕಡಾ ಮಾತ್ರ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

            ರಾಜಕೀಯ ಅಧಿಕಾರವನ್ನು ವಶಪಡಿಸಿಕೊಳ್ಳಲು ಮುಸ್ಲಿಮರು ಪ್ರಯತ್ನಿಸುವುದಿಲ್ಲ ಎಂದು ಖುರೈಶಿ ಹೇಳಿದ್ದಾರೆ.

           ದೇಶದಲ್ಲಿ ರಾಜಕೀಯ ಅಧಿಕಾರವನ್ನು ವಶಪಡಿಸಿಕೊಳ್ಳಲು ಮುಸ್ಲಿಮರು ಹಿಂದೂ ಜನಸಂಖ್ಯೆಯನ್ನು ಹಿಂದಿಕ್ಕುವ ಷಡ್ಯಂತ್ರದಲ್ಲಿ ತೊಡಗಿದ್ದಾರೆ ಎಂಬ "ಮಿಥ್ಯ" ವನ್ನು ಕಟುವಾಗಿ ಟೀಕಿಸಿದ ಅವರು, ಈ ಉದ್ದೇಶಕ್ಕಾಗಿ ಹೆಚ್ಚಿನ ಮಕ್ಕಳಿಗೆ ಜನ್ಮ ನೀಡುವಂತೆ ಅಲ್ಪಸಂಖ್ಯಾತ ಗುಂಪಿಗೆ ಯಾವುದೇ ಮುಸ್ಲಿಂ ನಾಯಕ ಅಥವಾ ವಿದ್ವಾಂಸರು ಸಮುದಾಯಕ್ಕೆ ಒತ್ತಾಯಿಸಲಿಲ್ಲ ಎನ್ನುವುದನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.

             ಮುಸ್ಲಿಮರು ಬಹುಪತ್ನಿತ್ವವನ್ನು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಒಂದು ಸಾಧನವಾಗಿ ಬಳಸುತ್ತಿದ್ದಾರೆ ಎಂಬ ವಾದಗಳನ್ನು ಕೂಡಾ ನಿರಾಕರಿಸಿದ ಮಾಜಿ ಮುಖ್ಯ ಚುನಾವಣಾ ಆಯುಕ್ತ, ಸರ್ಕಾರದ ಅಧ್ಯಯನದ ಪ್ರಕಾರ 1975 ರಲ್ಲಿ, ಎಲ್ಲಾ ಸಮುದಾಯಗಳು ಸ್ವಲ್ಪ ಮಟ್ಟಿಗೆ ಬಹುಪತ್ನಿತ್ವವನ್ನು ಹೊಂದಿದ್ದವು, ಆದರೆ ಮುಸ್ಲಿಮರು ಅವರಲ್ಲಿ ಅತ್ಯಂತ ಕಡಿಮೆ ಬಹುಪತ್ನಿತ್ವವನ್ನು ಹೊಂದಿದ್ದರು ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries