ನವದೆಹಲಿ: ಬ್ರಿಟನ್ನಲ್ಲಿ ಕರೊನಾ ವೈರಸ್ನ ಒಮಿಕ್ರಾನ್ ರೂಪಾಂತರಿಯ ಬಿಎ2 ಉಪ-ತಳಿಯ ಅಪಾಯ ಇನ್ನೂ ಕಳವಳಕಾರಿ ಮಟ್ಟದಲ್ಲಿದೆ ಎಂದು ಅಧ್ಯಯನವೊಂದು ದೃಢಪಡಿಸಿದೆ ಎಂದು ಗುರುವಾರ ಪ್ರಕಟವಾದ ವರದಿಗಳು ತಿಳಿಸಿವೆ.
0
samarasasudhi
ಮಾರ್ಚ್ 11, 2022
ನವದೆಹಲಿ: ಬ್ರಿಟನ್ನಲ್ಲಿ ಕರೊನಾ ವೈರಸ್ನ ಒಮಿಕ್ರಾನ್ ರೂಪಾಂತರಿಯ ಬಿಎ2 ಉಪ-ತಳಿಯ ಅಪಾಯ ಇನ್ನೂ ಕಳವಳಕಾರಿ ಮಟ್ಟದಲ್ಲಿದೆ ಎಂದು ಅಧ್ಯಯನವೊಂದು ದೃಢಪಡಿಸಿದೆ ಎಂದು ಗುರುವಾರ ಪ್ರಕಟವಾದ ವರದಿಗಳು ತಿಳಿಸಿವೆ.
ಇತರ ರೂಪಾಂತರಿಗಳಿಂದ ಸುಲಭವಾಗಿ ಗುರುತಿಸಲು ಸಾಧ್ಯವಾಗುವಂಥ ಕೆಲವು ಜೈವಿಕ ಬದಲಾವಣೆಗಳು ಈ ಪ್ರಭೇದದಲ್ಲಿ ಇಲ್ಲದಿರುವುದರಿಂದ ತಜ್ಞರು ಇದನ್ನು 'ಗುಪ್ತ ತಳಿ' ಎಂದು ವರ್ಣಿಸಿದ್ದಾರೆ.
4,184 ಕರೊನಾ ಕೇಸ್, 104 ಸಾವು:
ಭಾರತದಲ್ಲಿ ಗುರುವಾರ ಕರೊನಾ ಸೋಂಕಿನ 4,184 ಹೊಸ ಕೇಸ್ಗಳು ದೃಢಪಟ್ಟಿವೆ. 104 ರೋಗಿಗಳು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಾವಿನ ಸಂಖ್ಯೆ 5,15,459ಕ್ಕೆ ಏರಿದೆ. ಕಳೆದ ಒಂದು ದಿನದಲ್ಲಿ 6,554 ಜನರು ಗುಣಮುಖರಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 44,488ಕ್ಕೆ ಇಳಿದಿದೆ ಎಂದು ಸರ್ಕಾರ ಹೇಳಿದೆ.
ದೆಹಲಿಯಲ್ಲಿ ಗುರುವಾರ 208 ಹೊಸ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಒಟ್ಟು ಸಂಖ್ಯೆ 18,62,255ಕ್ಕೆ ಏರಿದೆ. ಒಬ್ಬರ ಸಾವಿನೊಂದಿಗೆ ರಾಜಧಾನಿಯಲ್ಲಿ ಬಲಿಯಾದವರ ಸಂಖ್ಯೆ 26,140ಕ್ಕೆ ಏರಿದೆ. ದೇಶದಲ್ಲಿ ಮಾರ್ಚ್ 9ರವರೆಗೆ 77,60,82,445 ಸ್ಯಾಂಪಲ್ಗಳ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.