ಕಾಸರಗೋಡು: ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ ವತಿಯಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಾಸರಗೋಡು ಪ್ರೆಸ್‍ಕ್ಲಬ್ ವತಿಯಿಂದ ಮಾಧ್ಯಮ ಪ್ರತಿನಿಧಿಗಳಿಗಾಗಿ 'ಬಾಲ ಪ್ರೇಮಿ ಮಾಧ್ಯಮಗಳು'ಎಂಬ ವಿಷಯದಲ್ಲಿ ಕಾರ್ಯಾಗಾರ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಜರುಗಿತು.
ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ.ಕೃಷ್ಣ ಕುಮಾರ್ ಉದ್ಘಾಟಿಸಿ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾದುದು. ಮಕ್ಕಳ ಅಪರಾಧ, ಪೋಕ್ಸೋ ಸಂತ್ರಸ್ತ ಬಾಲಕರ ಬಗ್ಗೆ ವಾರ್ತೆಗಳನ್ನು ಪ್ರಕಟಿಸುವ ಸಂದರ್ಭ ಮಾಧ್ಯಮಗಳು ಜಾಗ್ರತೆ ಪಾಲಿಸಬೇಕಾಗಿದೆ. ಮಾಧ್ಯಮಗಳು ಮಕ್ಕಳ ಪಾಲಿನ ನ್ಯಾಯವಾದಿಗಳಾಗಬೇಕು ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ವಿ.ಎಸ್ ಶಿಮ್ನಾ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ, ಕಾರ್ಯದರ್ಶಿ ಕೆ.ವಿ ಪದ್ಮೇಶ್ ಉಪಸ್ಥಿತರಿದ್ದರು.
ಈ ಸಂದರ್ಭ ಬಾಲ ಪ್ರೇಮಿ ಮಾಧ್ಯಮಗಳು-ಒಂದು ಅವಲೋಕನ, ಮಕ್ಕಳಿಗೆ ಸಂಬಂಧಿಸಿದ ಕಾನೂನು ಮತ್ತು ಮಾಧ್ಯಮಗಳ ಪಾಲುಗಾರಿಕೆ, ಮಕ್ಕಳ ಸಂರಕ್ಷಣಾ ವಿಧಾನಗಳು ಎಂಬ ವಿಷಯಗಳ ಬಗ್ಗೆ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಸಿ.ಎ ಬಿಂದು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ವಕೀಲೆ ಎ.ಕೆ ಪ್ರಿಯಾ, ಡಿಸಿಪಿಯು ಪ್ರೊಟೆಕ್ಷನ್ ಅಧಿಕಾರಿ ಎ.ಜಿ ಫೈಸಲ್ ತರಗತಿ ನಡೆಸಿದರು.


