HEALTH TIPS

ಗಡಿ ಬಿಕ್ಕಟ್ಟು: ಭಾರತ, ಚೀನಾ ನಡುವೆ ಶುಕ್ರವಾರ ಮಾತುಕತೆ

             ನವದೆಹಲಿಪೂರ್ವ ಲಡಾಖ್‌ ಗಡಿ ಬಿಕ್ಕಟ್ಟು ಶಮನಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಮಾರ್ಚ್‌ 11ರಂದು 15ನೇ ಸುತ್ತಿನ ಸೇನಾ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಿಗದಿಯಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

            ಗಾಲ್ವಾನ್‌ ಕಣಿವೆ ಸಂಘರ್ಷ ಉಂಟಾದ ಬಳಿಕ ಪಾಂಗಾಂಗ್‌ ಸೋ ನದಿಯ ಉತ್ತರ ಮತ್ತು ದಕ್ಷಿಣ ದಂಡೆ, ಗಾಲ್ವಾನ್‌ ಮತ್ತು ಇತರೆ ಪ್ರದೇಶಕ್ಕೆ ಸಂಬಂಧಪಟ್ಟಂತೆ ಇದುವರೆಗೆ 14 ಸುತ್ತಿನ ಮಾತುಕತೆಗಳು ನಡೆದಿವೆ. ಇದರಲ್ಲಿ ಯಾವುದೂ ಫಲಪ್ರದವಾಗಿಲ್ಲ.

          ಕಳೆದ ಜನವರಿಯಲ್ಲಿ ನಡೆದ 14ನೇ ಸುತ್ತಿನ ಮಾತುಕತೆಯಲ್ಲೂ ಯಾವುದೇ ಹೊಸ ತೀರ್ಮಾನವನ್ನೂ ಕೈಗೊಂಡಿರಲಿಲ್ಲ. ಗಾಲ್ವಾನ್‌ ಸಂಘರ್ಷ ನಡೆದ 22 ತಿಂಗಳ ಬಳಿಕ ಉಭಯ ತಂಡಗಳು ಶುಕ್ರವಾರ ಲಡಾಖ್‌ನ ಚುಶುಲ್‌ ಮೊಲ್ಡೊದಲ್ಲಿ ಮಾತುಕತೆ ನಡೆಯಲಿದೆ ಎಂದು ತಿಳಿಸಿವೆ.

           ಇತ್ತೀಚಿನ ದಿನಗಳು ಗಡಿ ಬಿಕ್ಕಟ್ಟು ಶಮನಕ್ಕೆ ಎರಡೂ ಕಡೆಯಿಂದಲೂ ಸಕರಾತ್ಮಕ ಹೇಳಿಕೆಗಳು ಹೊರ ಬೀಳುತ್ತಿವೆ. ಹೀಗಾಗಿ 15ನೇ ಸುತ್ತಿನ ಮಾತುಕತೆ ಮಹತ್ವಪಡೆದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries