HEALTH TIPS

ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲವರೋವ್ ನಾಳೆ ಭಾರತಕ್ಕೆ ಭೇಟಿ

            ನವದೆಹಲಿ: ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲವರೋವ್ ಅವರು ಗುರುವಾರದಿಂದ 2 ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ರಷ್ಯಾ ಪಡೆಗಳು ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾದ ಸಚಿವರೊಬ್ಬರ ಮೊದಲ ವಿದೇಶ ಪ್ರವಾಸ ಇದಾಗಿದೆ.

           ಈ ಸಂಬಂಧ ಒಂದು ಸಾಲಿನ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಇಲಾಖೆ, 'ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲವರೋವ್ ಅವರು ಮಾರ್ಚ್ 31ರಿಂದ ಏಪ್ರಿಲ್ 1ರವರೆಗೆ ಭಾರತದ ಪ್ರವಾಸದಲ್ಲಿ ಇರುತ್ತಾರೆ' ಎಂದು ಹೇಳಿದೆ.

           ಈ ಸಂದರ್ಭದಲ್ಲಿ ರಷ್ಯಾವು ಭಾರತಕ್ಕೆ ರಿಯಾಯತಿ ದರದಲ್ಲಿ ತೈಲ ಮಾರಾಟ ಮತ್ತು ರಷ್ಯಾದ ಮೇಲೆ ಪಶ್ಚಿಮ ದೇಶಗಳು ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ವ್ಯಾಪಾರ-ವಹಿವಾಟಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಾಧ್ಯತೆ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries