ಕಾಸರಗೋಡು: ಚೆಮ್ಮನಾಡ್ ಕುಟುಂಬಶ್ರೀಯು ಸಮಾಜದ ಎಲ್ಲಾ ವರ್ಗದ ಜನರನ್ನು ಸಂರಕ್ಷಿಸುವಲ್ಲಿ ಮಾದರಿಯಾಗಿದೆ. ಇಲ್ಲಿಯ 400 ಕುಟುಂಬಶ್ರೀ ಘಟಕಗಳಿಂದ ಆರು ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ಸಂಕಷ್ಟದ ಕುಟುಂಬಗಳಿಗೆ ನೆರವಾಗುವ ಭರವಸೆಯಲ್ಲಿ ಮುಂದುವರಿಯುತ್ತಿದೆ.
ವಿವಿಧ ವಸತಿ ಯೋಜನೆಗಳಲ್ಲಿ ಸೇರ್ಪಡೆಯಾಗದ, ಮನೆ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಿ ವಾರ್ಡ್ ಮಟ್ಟದಲ್ಲಿ ಅಂಬಿಕಾ ಅವರನ್ನು ಆಯ್ಕೆ ಮಾಡಲಾಯಿತು. ಅಂಬಿಕಾ ಪಾಶ್ರ್ವವಾಯುವಿಗೆ ತುತ್ತಾಗಿ ಕುಟುಂಬ ಸಂಕಷ್ಟದಲ್ಲಿದ್ದಾಗ ವಿಧವೆಯಾದ ಅಂಬಿಕಾ ಮತ್ತು ಆಕೆಯ ಮಕ್ಕಳು ಕ್ವಾರ್ಟರ್ಸ್‍ನಲ್ಲಿ ವಾಸಿಸುತ್ತಿದ್ದಾರೆ. ಕುಟುಂಬದ 10 ಸೆಂಟ್ಸ್ ಆಸ್ತಿಯಲ್ಲಿ ಕುಟುಂಬಶ್ರೀ ನೇತೃತ್ವದಲ್ಲಿ ಎರಡು ಕೋಣೆಗಳ ಮನೆ ನಿರ್ಮಿಸಲಾಗುತ್ತಿದೆ.
ಇದರ ಬೆನ್ನಲ್ಲೇ 60 ವರ್ಷದ ಲೀಲಾವತಿ ಅವರಿಗೆ ಪೆÇಯಿನಾಚಿ ಕೋಲಂಕುನ್ನು ಎಂಬಲ್ಲಿ ಮನೆ ನಿರ್ಮಿಸಿಕೊಡುವ ಪ್ರಯತ್ನ ನಡೆಯುತ್ತಿದೆ. ಮಕ್ಕಳಿಲ್ಲದವರಿಗೆ ಆಶ್ರಯ ಯೋಜನೆಯಿಂದ ಪಡೆದ 1,25,000 ರೂ. ಹಾಗೂ ಕುಟುಂಬಶ್ರೀ ಘಟಕಗಳಿಂದ ಸಂಗ್ರಹಿಸಿದ ಮೊತ್ತದೊಂದಿಗೆ ಶೀಟ್ ಹೊದಿಸಿದ ಮನೆಯನ್ನು ನೀಡಲಾಗುವುದು. ಪರಂಬಿನಕಂನಲ್ಲಿ ಟಾರ್ಪಲ್ ಹಾಕಿಕೊಂಡು ಜೀವನ ನಡೆಸುತ್ತಿರುವ ಇವರಿಗೆ ಕುಟುಂಬಶ್ರೀ ಅಕ್ಷರಶಃ ಸಹಾಯ ಮಾಡುತ್ತಿದೆ.
ಜತೆಗೆ ಚೆಮ್ಮನಾಡು ಕುಟುಂಬಶ್ರೀ ನಿರ್ಗತಿಕ ರೋಗಿಗಳಿಗೆ 7 ಲಕ್ಷಕ್ಕೂ ಅಧಿಕ ವೈದ್ಯಕೀಯ ನೆರವು ನೀಡಿ ಬಡ ವಧುವಿಗೆ ಚಿನ್ನಾಭರಣ ನೀಡುವ ಮೂಲಕ ಮಾದರಿಯಾಗಿದ್ದಾರೆ. ಕಳೆದ ವರ್ಷ ಕೋವಿಡ್ ನಿಬರ್ಂಧದಿಂದಾಗಿ ಸ್ಟೇಷನರಿ ಅಂಗಡಿಗಳು ಬಂದ್ ಆಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಕಷ್ಟ ನಿವಾರಿಸಲು ಕುಟುಂಬಶ್ರೀ ಕಾರ್ಯಕರ್ತೆಯರು 1 ಲಕ್ಷ ರೂಪಾಯಿ ಮೌಲ್ಯದ ನೋಟ್‍ಬುಕ್, ಪೆನ್ ಮತ್ತಿತರ ಲೇಖನ ಸಾಮಗ್ರಿಗಳನ್ನು ಅತ್ಯಂತ ಕಡಿಮೆ ದರದಲ್ಲಿ ಮನೆಗಳಿಗೆ ವಿತರಿಸಿದ್ದಾರೆ. ಸಿಡಿಎಸ್ ನೇತೃತ್ವದಲ್ಲಿ ಮ್ಯಾರೇಜ್ ಬ್ಯೂರೋ ಮತ್ತು ಉದ್ಯೋಗ ನೋಂದಣಿಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ.
ಬಡ ಮನೆಗಳ ಹುಡುಗಿಯರ ವಿವಾಹ ಕನಸನ್ನು ಸಾಕಾರಗೊಳಿಸಲು ಒಮ್ಮೆ ಬಳಸಿದ ವಿವಾಹ ದಿರಿಸುಗಳನ್ನು ಸಂಗ್ರಹಿಸಲು ಹೊಸ ಕಾರ್ಯಕ್ರಮವನ್ನು ಪರಿಗಣಿಸಲಾಗುತ್ತಿದೆ. ಸದಸ್ಯ ಕಾರ್ಯದರ್ಶಿ ಎಂ.ಕೆ.ಪ್ರತೀಶ್ ಹಾಗೂ ಸಿಡಿಎಸ್ ಅಧ್ಯಕ್ಷೆ ಮುಮ್ತಾಜ್ ಅಬೂಬಕರ್ ಮಾತನಾಡಿ, 2022-23ನೇ ವರ್ಷವನ್ನು ದಾನ ವರ್ಷವನ್ನಾಗಿ ಆಯ್ಕೆ ಮಾಡಲಾಗಿದ್ದು, ಪ್ರತಿ ತಿಂಗಳು ವಿವಿಧ ದತ್ತಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದಿರುವರು.





