HEALTH TIPS

ಪಕ್ಷಾಂತರ: ರಾಜಕುಮಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯನ್ನು ಅನರ್ಹಗೊಳಿಸಿದ ಚುನಾವಣಾ ಆಯೋಗ: ಆರು ವರ್ಷಗಳವರೆಗೆ ನಿಷೇಧ

                     ಇಡುಕ್ಕಿ: ರಾಜ್ಯ ಚುನಾವಣಾ ಆಯೋಗವು ರಾಜಕುಮಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿಸ್ಸಿ ಎಂ.ಕೆ. ಅವರನ್ನು ಅನರ್ಹಗೊಳಿಸಿದೆ. ಪಕ್ಷಾಂತರ ಕಾಯ್ದೆಯಡಿ ಚುನಾವಣಾ ಆಯೋಗ ಅವರನ್ನು ಅನರ್ಹಗೊಳಿಸಿದೆ. ನಿನ್ನೆಯಿಂದ ಆರು ವರ್ಷಗಳ ಕಾಲ ಈ ಕ್ರಮ ಜರಗಿಸಲಾಗಿದೆ.

                     2019 ರ ರಾಜಕುಮಾರಿ ಪಂಚಾಯತ್‍ನ ಅಧ್ಯಕ್ಷೀಯ ಚುನಾವಣೆಯಲ್ಲಿ, ಟಿಸ್ಸಿ ಯುಡಿಎಫ್‍ನ ಅಧಿಕೃತ ಅಭ್ಯರ್ಥಿ ವಿರುದ್ಧ ವಿಪ್ ಉಲ್ಲಂಘಿಸಿ ಎಲ್‍ಡಿಎಫ್‍ಗೆ ಸ್ಪರ್ಧಿಸಿದ್ದರು. ಇದರ ವಿರುದ್ದ  ಕ್ರಮ ಕೈಗೊಳ್ಳಲಾಗಿದೆ. ಟಿಸ್ಸಿ ಅವರನ್ನು ರಾಜ್ಯ ಚುನಾವಣಾ ಆಯುಕ್ತ ಎ.ಶಹಜಹಾನ್ ಅನರ್ಹಗೊಳಿಸಿದ್ದಾರೆ. ಹಾಲಿ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನಕ್ಕೆ ಟಿಸ್ಸಿ ರಾಜೀನಾಮೆ ನೀಡಬೇಕಾಗಿದೆ.

                       ರಾಜಕುಮಾರಿ ಪಂಚಾಯತ್ ಸದಸ್ಯ ಪಿ.ಟಿ.ಎಲ್ದೋ ಅವರು ಪಕ್ಷಾಂತರ ನಿಷೇಧ ಕಾಯ್ದೆಯಡಿ ಟಿಸ್ಸಿ ಅವರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ರಾಜ್ಯ ಚುನಾವಣಾ ಆಯೋಗ ನಡೆಸಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries