ಕರಾಚಿ: ಅಪಹರಣಕ್ಕೆ ಪ್ರತಿರೋಧ ತೋರಿದ ಕಾರಣಕ್ಕೆ 18 ವರ್ಷದ ಹಿಂದೂ ಯುವತಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ದಕ್ಷಿಣ ಭಾಗದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.
0
samarasasudhi
ಮಾರ್ಚ್ 22, 2022
ಕರಾಚಿ: ಅಪಹರಣಕ್ಕೆ ಪ್ರತಿರೋಧ ತೋರಿದ ಕಾರಣಕ್ಕೆ 18 ವರ್ಷದ ಹಿಂದೂ ಯುವತಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ದಕ್ಷಿಣ ಭಾಗದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.
ಸೋಮವಾರ ಪೂಜಾ ಓದ್ ಎಂಬ ಯುವತಿಯನ್ನು ಅಪಹರಣ ಮಾಡಲು ಯತ್ನಿಸಲಾಗಿತ್ತು.
ಪಾಕಿಸ್ತಾನದಲ್ಲಿ ಪ್ರತಿ ವರ್ಷವೂ ಅಲ್ಪಸಂಖ್ಯಾತ ಸಮುದಾಯಕ್ಕೆ (ಹಿಂದೂಗಳು) ಸೇರಿದ ಹಲವು ಮಹಿಳೆಯರನ್ನು ಅಪಹರಣ ಮಾಡಲಾಗುತ್ತದೆ. ಧಾರ್ಮಿಕ ಉಗ್ರಗಾಮಿಗಳು ಅವರನ್ನು ಬಲವಂತವಾಗಿ ಮತಾಂತರ ಮಾಡುತ್ತಾರೆ ಎಂದು ವರದಿಗಳು ತಿಳಿಸಿವೆ. ವಿಶೇಷವಾಗಿ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಸಮುದಾಯಗಳ ಮೇಲೆ ಇಂಥ ಘಟನೆಗಳು ಹೆಚ್ಚಾಗಿ ನಡೆಯುತ್ತವೆ ಎಂದು ವರದಿಯಾಗಿದೆ.
2013-2019ರಲ್ಲಿ 156 ಬಲವಂತದ ಮತಾಂತರ ಪ್ರಕಣಗಳು ನಡೆದಿವೆ ಎಂದು ಪೀಪಲ್ಸ್ ಕಮಿಷನ್ ಫಾರ್ ಮೈನಾರಿಟೀಸ್ ರೈಟ್ಸ್ ಮತ್ತು ಸೆಂಟರ್ ಫಾರ್ ಸೋಷಿಯಲ್ ಜಸ್ಟೀಸ್ ಸಂಘಟನೆಗಳ ಹೇಳಿವೆ.