HEALTH TIPS

ಸ್ಥಿರ ದೂರವಾಣಿ ಸೇವೆ ಪೂರೈಕೆಯಲ್ಲಿ ಏರ್ಟೆಲ್ ಹಿಂದಿಕ್ಕಿದ ಜಿಯೋ ದೇಶದಲ್ಲೇ ನಂ.02

           ನವದೆಹಲಿ: ಸ್ಥಿರ ದೂರವಾಣಿ ಸೇವೆ ಪೂರೈಕೆಯಲ್ಲಿ ಭಾರ್ತಿ ಏರ್ಟೆಲ್ ಸಂಸ್ಥೆಯನ್ನು ಹಿಂದಿಕ್ಕಿರುವ ರಿಲಯನ್ಸ್ ಜಿಯೋ ದೇಶದಲ್ಲೇ ನಂ.02 ಸ್ಥಾನಕ್ಕೇರಿದೆ.

          ಈ ಕುರಿತಂತೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ 'ಟ್ರಾಯ್' ಮಾಹಿತಿ ನೀಡಿದ್ದು, 'ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಸ್ಥಿರ ಲೈನ್ ಸೇವಾ ಪೂರೈಕೆಯಲ್ಲಿ ಏರ್ ಟೆಲ್ ಅನ್ನು ಹಿಂದಿಕ್ಕಿದ್ದು, ಫೆಬ್ರವರಿ 2022 ರಲ್ಲಿ ರಿಲಯನ್ಸ್ ಜಿಯೋ ದೇಶದ ಎರಡನೇ ಅತಿದೊಡ್ಡ ಸ್ಥಿರ-ಲೈನ್ ಸೇವಾ ಪೂರೈಕೆದಾರನಾಗಿದೆ ಎಂದು ಹೇಳಿದೆ.

             ರಿಲಯನ್ಸ್ ಜಿಯೋ ವೈರ್‌ಲೈನ್ ಚಂದಾದಾರರ ಸಂಖ್ಯೆ 58.85 ಲಕ್ಷದಷ್ಟಿದ್ದು, ಏರ್‌ಟೆಲ್ ಫೆಬ್ರವರಿಯಲ್ಲಿ 57.66 ಲಕ್ಷಕ್ಕೂ ಹೆಚ್ಚು ಗ್ರಾಹಕರ ನೆಲೆಯನ್ನು ದಾಖಲಿಸಿದೆ. ರಿಲಯನ್ಸ್ ಜಿಯೋಗೆ ಫೆಬ್ರವರಿಯಲ್ಲಿ 2.44 ಲಕ್ಷ ಗ್ರಾಹಕರು ಸೇರಿಕೊಂಡಿದ್ದಾರೆ. ಇದು ಜಿಯೋನ  ವೈರ್‌ಲೈನ್ ಟೆಲಿಫೋನ್ ಬೆಳವಣಿಗೆಗೆ ಕಾರಣವಾಯಿತು. ಏರ್‌ಟೆಲ್ 91,243 ಹೊಸ ಬಳಕೆದಾರರನ್ನು ಸೇರಿಸಿಕೊಂಡು ಮೂರನೇ ಸ್ಥಾನದಲ್ಲಿದೆ.

              ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದೂ, ಅತೀವ ಸ್ಪರ್ಧೆಯ ಹೊರತಾಗಿಯೂ ಈಗ 75.76 ಲಕ್ಷ ವೈರ್‌ಲೈನ್ ಗ್ರಾಹಕರನ್ನು ಬಿಎಸ್ ಎನ್ ಎಲ್ ಹೊಂದಿದೆ. ಸರ್ಕಾರಿ ಸ್ವಾಮ್ಯದ BSNL ಮತ್ತು MTNL, ಜಂಟಿಯಾಗಿ ಈ ವಿಭಾಗದಲ್ಲಿ 49.5 ಶೇಕಡಾ ಪಾಲನ್ನು ಹೊಂದಿದ್ದು, ಕ್ರಮವಾಗಿ 49,074 ಮತ್ತು 21,900 ಸ್ಥಿರ-ಲೈನ್ ಗ್ರಾಹಕರನ್ನು ಕಳೆದುಕೊಂಡಿವೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries