ಅಮರಾವತಿ: ಹೊಸದಾಗಿ ರೂಪುಗೊಂಡ 13 ಜಿಲ್ಲೆಗಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸೋಮವಾರ ಚಾಲನೆ ನೀಡಿದರು.
0
samarasasudhi
ಏಪ್ರಿಲ್ 04, 2022
ಅಮರಾವತಿ: ಹೊಸದಾಗಿ ರೂಪುಗೊಂಡ 13 ಜಿಲ್ಲೆಗಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸೋಮವಾರ ಚಾಲನೆ ನೀಡಿದರು.
ಈ ಮೂಲಕ ರಾಜ್ಯದಲ್ಲಿನ ಜಿಲ್ಲೆಗಳ ಸಂಖ್ಯೆ 13ರಿಂದ 26ಕ್ಕೆ ಏರಿದಂತಾಗಿದೆ.
ಹೊಸ ಜಿಲ್ಲೆಗಳು ರೂಪುಗೊಂಡಿದ್ದಕ್ಕಾಗಿ ಮುಖ್ಯಮಂತ್ರಿ ಜಗನ್ ಅವರು ರಾಜ್ಯದ ಜನರು, ಅಧಿಕಾರಿಗಳು ಮತ್ತು ಕಾರ್ಮಿಕರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು. ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳು ನೂತನ ಜಿಲ್ಲೆಗಳ ಜನರಿಗೆ ತಲುಪುವಂತೆ ನಿಗಾ ವಹಿಸುವಂತೆ ಜಗನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
'ಗ್ರಾಮ ಮತ್ತು ವಾರ್ಡ್ ಕಾರ್ಯಾಲಯದ ರೂಪದಲ್ಲಿ ಅಧಿಕಾರ ವಿಕೇಂದ್ರೀಕರಣದ ಮೂಲಕ ನಾವು ಅಭಿವೃದ್ಧಿಯನ್ನು ನೋಡಿದ್ದೇವೆ. ಆದ್ದರಿಂದ ಈಗ ನಾವು ಜಿಲ್ಲಾ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಿಸುತ್ತಿದ್ದೇವೆ. ಈಗ ನಾವು ಆಂಧ್ರಪ್ರದೇಶದಲ್ಲಿ 26 ಜಿಲ್ಲೆಗಳನ್ನು ಹೊಂದಿದ್ದು ಜಿಲ್ಲೆಗೊಂದರಂತೆ ಸಂಸದೀಯ ಕ್ಷೇತ್ರವನ್ನು ಹೊಂದಿದ್ದೇವೆ' ಎಂದು ಜಗನ್ ಹೇಳಿದರು.