ಕಾಸರಗೋಡು: ಏಪ್ರಿಲ್ 18 ರಂದು ಬೆಳಿಗ್ಗೆ 10 ಗಂಟೆಗೆ ಅನೋಡಿಪಳ್ಳ ಜಲಸಂರಕ್ಷಣಾ ಯೋಜನೆಯ ಪೂರ್ಣಗೊಳಿಸುವಿಕೆ ಮತ್ತು ಸ್ವತ್ತುಗಳ ಹಸ್ತಾಂತರವನ್ನು ರಾಜ್ಯ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಸಚಿವ ಅಹ್ಮದ್ ದೇವರಕೋವಿಲ್ ಉದ್ಘಾಟಿಸುವರು.
ಅನೋಡಿಪಳ್ಳ ಮಂಜೇಶ್ವರ ಬ್ಲಾಕ್‍ನ ಪುತ್ತಿಗೆ ಗ್ರಾಮ ಪಂಚಾಯತ್‍ನ ಮುಕ್ಕಾರಿಕಂಡದಲ್ಲಿರುವ 5.0 ಹೆಕ್ಟೇರ್ ಜಲಾಶಯವಾಗಿದೆ. ಜಲಾಶಯ ಅಭಿವೃದ್ಧಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ಯೋಜನೆ ಸಿದ್ಧಪಡಿಸಲಾಗಿತ್ತು. ಹಿಂದೂಸ್ತಾನ್ ಏರೋನಾಟಿಕ್ಸ್ ಕ್ಲಾಸ್ ಲಿಮಿಟೆಡ್‍ನ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ 2020-21ನೇ ಸಾಲಿಗೆ `50 ಲಕ್ಷ ಮೊತ್ತವನ್ನು ಮಂಜೂರು ಮಾಡಲಾಗಿದೆ. ಜಿಲ್ಲಾ ಮಣ್ಣು ಸಂರಕ್ಷಣಾ ಕಚೇರಿಯ ನೇತೃತ್ವದಲ್ಲಿ ಟೆಂಡರ್ ಕರೆದು ಕಾಮಗಾರಿ ನಡೆಸಲಾಗಿತ್ತು. `44.5 ಲಕ್ಷ ವೆಚ್ಚದಲ್ಲಿ ಅನೋಡಿಪಳ್ಳ ಜಲಸಂರಕ್ಷಣಾ ಕಾಮಗಾರಿ ಫೆಬ್ರವರಿಯಲ್ಲಿ ಪೂರ್ಣಗೊಂಡಿದೆ. ಯೋಜನೆಯ ಅನುಷ್ಠಾನದಿಂದ, ಈ ಪ್ರದೇಶದಲ್ಲಿ ಅಂತರ್ಜಲ ಲಭ್ಯತೆ ಹೆಚ್ಚಿಸಬಹುದು ಮತ್ತು ಬರ ಪರಿಹಾರವನ್ನು ಸಾಧಿಸಬಹುದು. ಪುತ್ತಿಗೆ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಅನೋಡಿಪಳ್ಳ ಯೋಜನೆಯ ಹೆಚ್ಚಿನ ನಿರ್ವಹಣೆ ನಡೆಯಲಿದೆ.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜಮೋಹನ್ ಉ|ಣ್ಣಿತ್ತಾನ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ನಾಗರಿಕ ಸರಬರಾಜು ನಿರ್ದೇಶಕರು ಹಾಗೂ ಮಾಜಿ ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಇತರ ಜನಪ್ರತಿನಿಧಿಗಳು, ಕಾಸರಗೋಡು ಜಿಲ್ಲಾ ಮಣ್ಣು ಸಂರಕ್ಷಣಾಧಿಕಾರಿ ವಿ.ಎಂ.ಅಶೋಕ್ ಕುಮಾರ್, ಎಚ್.ಎ.ಎಲ್ ಜನರಲ್ ಮ್ಯಾನೇಜರ್ ಅರುಣ್ ಜೆ.ಸಿರ್ಕೆಟ್ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.


