HEALTH TIPS

ಯಾವುದೇ ಕೋವಿಡ್ -19 ರೂಪಾಂತರದ ವಿರುದ್ಧ ಹೋರಾಡಲು ಭಾರತ ಈಗ ಉತ್ತಮವಾಗಿ ಸಿದ್ಧವಾಗಿದೆ: ಸೆರಮ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಆಧಾರ್ ಪೂನಾವಾಲಾ

              ನವದೆಹಲಿ: ಚೀನಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ ರೂಪಾಂತರಿ ವೈರಸ್ ವರದಿಯಾಗುತ್ತಿರುವಂತೆಯೇ ಇತ್ತ ಯಾವುದೇ ಕೋವಿಡ್ -19 ರೂಪಾಂತರದ ವಿರುದ್ಧ ಹೋರಾಡಲು ಭಾರತ ಈಗ ಉತ್ತಮವಾಗಿ ಸಿದ್ಧವಾಗಿದೆ ಎಂದು ಸೆರಮ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಆಧಾರ್ ಪೂನಾವಾಲಾ ಹೇಳಿದ್ದಾರೆ.

             ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಪೂನಾವಾಲಾ, 'ಕೋವಿಡ್ ಸಾಂಕ್ರಾಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಭಾರತವು 2020 ಕ್ಕಿಂತ ಈಗ ಅದನ್ನು ಎದುರಿಸಲು ಉತ್ತಮವಾಗಿ ಸಿದ್ಧವಾಗಿದೆ. ನಾವು 2020 ರಲ್ಲಿದ್ದಕ್ಕಿಂತ ಖಂಡಿತವಾಗಿ ಉತ್ತಮವಾಗಿ ತಯಾರಾಗಿದ್ದೇವೆ. 2020 ರಲ್ಲಿ, ನಾವು ಪರೀಕ್ಷಾ ಸಾಮರ್ಥ್ಯಗಳನ್ನು ಹೊಂದಿರಲಿಲ್ಲ, ಜೀನೋಮಿಕ್ ಅನುಕ್ರಮವನ್ನು ಹೊಂದಿರಲಿಲ್ಲ. ನಮ್ಮಲ್ಲಿ ಯಾವುದೂ ಇರಲಿಲ್ಲ. ಆದರೆ ಇಂದು ನಾವು ಇಲ್ಲಿ ಉತ್ತಮ ಆಸ್ಪತ್ರೆ ಮೂಲಸೌಕರ್ಯಗಳನ್ನು ಹೊಂದಿದ್ದೇವೆ ಎಂದು ಹೇಳಿದರು.

            ಅಂತೆಯೇ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ಸೆರಮ್ ಇನ್‌ಸ್ಟಿಟ್ಯೂಟ್ ಸಿಇಒ, 'ಭಾರತವು ಈಗ ಆರೋಗ್ಯ ರಕ್ಷಣೆಯನ್ನು ಬಲಪಡಿಸಿದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶವು ಯಾವ ಸ್ಥಾನದಲ್ಲಿದೆ ಎಂಬುದನ್ನು ನೀವು ನೋಡಿದಾಗ, ನಾವು ಈ ಎಲ್ಲಾ ಕ್ಷೇತ್ರಗಳು, ಲಸಿಕೆ ಚಿಕಿತ್ಸೆಗಳು ಇತ್ಯಾದಿಗಳನ್ನು ಬಲಪಡಿಸಿದ್ದೇವೆ. 2020 ರಲ್ಲಿ, ಸಾಂಕ್ರಾಮಿಕ ರೋಗವು ಜಾಗತಿಕವಾಗಿ ಎಲ್ಲರನ್ನೂ ಸೆಳೆಯಿತು. ಈಗಿನ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗಿದೆ. ಎಲ್ಲಾ ವಯಸ್ಕರಿಗೆ ಅಔಗಿIಆ-19 ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಅವಕಾಶ ನೀಡುವ ಕೇಂದ್ರದ ನಿರ್ಧಾರವು ಭವಿಷ್ಯದಲ್ಲಿ ಬರಬಹುದಾದ ಯಾವುದೇ ತರಂಗವನ್ನು ಎದುರಿಸಲು ದೇಶವನ್ನು ಉತ್ತಮ ರೀತಿಯಲ್ಲಿ ಸಿದ್ಧಪಡಿಸಿದೆ ಎಂದು ಹೇಳಿದರು.

               ಅಲ್ಲದೆ ಖಾಸಗಿ ಲಸಿಕೆ ಕೇಂದ್ರಗಳಲ್ಲಿ 18-ಕ್ಕೂ ಹೆಚ್ಚು ವಯಸ್ಸಿನ ಜನಸಂಖ್ಯೆಗೆ ಅಔಗಿIಆ-19 ಲಸಿಕೆಯ ಮುನ್ನೆಚ್ಚರಿಕೆಯ ಮೂರನೇ ಡೋಸ್ ಏಪ್ರಿಲ್ 10 ರಂದು ಪ್ರಾರಂಭವಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಎರಡನೇ ಡೋಸ್ ಪಡೆದ ವ್ಯಕ್ತಿಗಳು 2ನೇ ಡೋಸ್ ಲಸಿಕೆ ಪಡೆದ ಒಂಬತ್ತು ತಿಂಗಳು ಪೂರೈಸಿದ ಬಳಿಕ ಮುನ್ನೆಚ್ಚರಿಕೆಯ ಬೂಸ್ಟರ್ ಡೋಸ್‌ಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

               ಗಮನಾರ್ಹವಾಗಿ, ಏಪ್ರಿಲ್ 9 ರಂದು, ಖಾಸಗಿ ಆಸ್ಪತ್ರೆಗಳಿಗೆ ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ನ ಬೆಲೆಯನ್ನು ಪ್ರತಿ ಡೋಸ್‌ಗೆ ರೂ 600 ರಿಂದ ರೂ 225 ಕ್ಕೆ ಪರಿಷ್ಕರಿಸಿರುವುದಾಗಿ ಸೆರಂ ಸಂಸ್ಥೆ ಘೋಷಿಸಿತು. ಕೋವಿಶೀಲ್ಡ್ ಮಾತ್ರವಲ್ಲದೇ ಕೋವ್ಯಾಕ್ಸಿನ್ ದರ ಕೂಡ ಇಳಿಕೆ ಮಾಡಲಾಗಿತ್ತು. ಈ ಸೌಲಭ್ಯವು ಎಲ್ಲಾ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಖಾಸಗಿ ಕೋವಿಡ್-19 ಲಸಿಕೆ ಕೇಂದ್ರಗಳಿಗೆ ಲಸಿಕೆ ವೆಚ್ಚಕ್ಕಿಂತ ಹೆಚ್ಚಿನ ಲಸಿಕೆಗೆ ಸೇವಾ ಶುಲ್ಕವಾಗಿ ಗರಿಷ್ಠ 150 ರೂ.ವರೆಗೆ ಶುಲ್ಕ ವಿಧಿಸಲು ಕೇಂದ್ರವು ಅನುಮತಿ ನೀಡಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries