ಪ್ಯಾರಿಸ್: ಸೌರಮಂಡಲದ ಕೊನೆಯ ಗ್ರಹ ಪ್ಲುಟೊದಲ್ಲಿ ಭಾರಿಗಾತ್ರದ ಹಿಮದ ದಿಬ್ಬಗಳಿದ್ದವು. ಗ್ರಹದ ಮೇಲ್ಮೈಯಲ್ಲಿ ಕಂಡುಬರುವ ಹಿಮದ ರಾಶಿಗಳು ಇಂಥ ದಿಬ್ಬಗಳು ಇದ್ದವು ಎಂಬುದನ್ನು ಸೂಚಿಸುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
0
samarasasudhi
ಏಪ್ರಿಲ್ 13, 2022
ಪ್ಯಾರಿಸ್: ಸೌರಮಂಡಲದ ಕೊನೆಯ ಗ್ರಹ ಪ್ಲುಟೊದಲ್ಲಿ ಭಾರಿಗಾತ್ರದ ಹಿಮದ ದಿಬ್ಬಗಳಿದ್ದವು. ಗ್ರಹದ ಮೇಲ್ಮೈಯಲ್ಲಿ ಕಂಡುಬರುವ ಹಿಮದ ರಾಶಿಗಳು ಇಂಥ ದಿಬ್ಬಗಳು ಇದ್ದವು ಎಂಬುದನ್ನು ಸೂಚಿಸುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ನಾಸಾದ 'ನ್ಯೂ ಹಾರಿಜನ್' ಗಗನನೌಕೆಯು ಕಳಿಸಿರುವ ಚಿತ್ರಗಳನ್ನು ವಿಶ್ಲೇಷಿಸಿದ ನಂತರ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.
ಮಂಜುಗಡ್ಡೆ ಮಿಶ್ರಿತ ನೀರು ಗ್ರಹದ ಮೇಲ್ಮೈಯಲ್ಲಿ ಒಸರುತ್ತದೆ. ಕೆಲವೊಮ್ಮೆ ಮಂಜುಗಡ್ಡೆಗಳೇ ಕರಗಿ ತೇಲಲು ಆರಂಭಿಸುತ್ತವೆ. ಇವು ಕಾಲಾನಂತರ ದಿಬ್ಬಗಳಾಗುತ್ತವೆ ಎಂದು ಕೊಲೊರಾಡೊದಲ್ಲಿರುವ ಸೌತ್‌ವೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿ ಕೆಲ್ಸಿ ಸಿಂಗರ್ ಹೇಳಿದ್ದಾರೆ.
'ಈ ಹಿಮದ ದಿಬ್ಬಗಳು ಯಾವಾಗ ರಚನೆಯಾದವು ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಕೆಲ ಕೋಟಿ ವರ್ಷಗಳ ಹಿಂದೆ ರೂಪುಗೊಂಡಿರಬಹುದು' ಎಂದು ಅವರು ಹೇಳಿದ್ದಾರೆ.