HEALTH TIPS

ಕ್ರೆಡಿಟ್​-ಡೆಬಿಟ್ ಕಾರ್ಡ್ ಕ್ಲೋಸ್ ಇನ್ನು ಸರಳ; ಜುಲೈ 1ರಿಂದ ಹೊಸ ನಿಯಮ

            ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿತರಣೆ, ಕಾರ್ಯಾಚರಣೆ ಮತ್ತು ಕ್ಲೋಸ್ ಮಾಡುವುದಕ್ಕೆ ಅಗತ್ಯವಾದ ಪ್ರಮುಖ ಮಾರ್ಗದರ್ಶಿ ಸೂತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಪ್ರಕಟಿಸಿದೆ. ಇದು ಈ ವರ್ಷ ಜುಲೈ 1ರಿಂದ ಚಾಲ್ತಿಗೆ ಬರಲಿದೆ.

                        ಈ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.

  •            ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದಕ್ಕೆ ಮನವಿ ಬಂದ 7 ದಿನಗಳ ಒಳಗೆ ಅದನ್ನು ಅಂಗೀಕರಿಸಬೇಕು. ಇದು ಆ ಕ್ರೆಡಿಟ್ ಕಾರ್ಡ್​ದಾರ ಬಾಕಿ ಪಾವತಿ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಮಾಡುವ ಷರತ್ತನ್ನು ಒಳಗೊಂಡಿದೆ.
  • ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದಕ್ಕೆ ಕ್ರಮ ತೆಗೆದುಕೊಂಡ ಕೂಡಲೆ ಇ ಮೇಲ್, ಎಸ್​ಎಂಎಸ್ ಮುಂತಾದವುಗಳ ಮೂಲಕ ಈ ಬಗ್ಗೆ ಕಾರ್ಡ್ ಬಳಕೆದಾರರಿಗೆ ಮಾಹಿತಿ ನೀಡಬೇಕು.
  •              ಕ್ರೆಡಿಟ್ ಕಾರ್ಡ್ ಖಾತೆ ಮುಚ್ಚಲು ಮನವಿ ಸಲ್ಲಿಸುವುದಕ್ಕೆ ಕಾರ್ಡ್ ಬಳಕೆದಾರರಿಗೆ ಹಲವು ವೇದಿಕೆಗಳನ್ನು ಒದಗಿಸಬೇಕು. ಇದರಲ್ಲಿ, ಸಹಾಯವಾಣಿ, ನಿಶ್ಚಿತ ಇ ಮೇಲ್ ಐಡಿ, ಇಂಟರಾಕ್ಟಿವ್ ವಾಯ್್ಸ ರೆಸ್ಪಾನ್ಸ್ (ಐವಿಆರ್), ವೆಬ್​ಸೈಟ್​ನಲ್ಲಿ ಕಾಣುವಂತೆ ಇದರ ಲಿಂಕ್, ಇಂಟರ್​ನೆಟ್ ಬ್ಯಾಂಕಿಂಗ್, ಮೊಬೈಲ್ ಆಪ್ ಮತ್ತು ಇತರೆ ವೇದಿಕೆಗಳು ಒಳಗೊಂಡಿವೆ.
  • ಕ್ರೆಡಿಟ್ ಕಾರ್ಡ್ ಖಾತೆಯನ್ನು ಮುಚ್ಚುವ ಮನವಿಯನ್ನು ಅಂಚೆ ಅಥವಾ ನಿಶ್ಚಿತ ವಿಧಾನದ ಮೂಲಕವೇ ಕಳುಹಿಸಬೇಕು ಎಂದು ಗ್ರಾಹಕ ರಿಗೆ ಕ್ರೆಡಿಟ್ ಕಾರ್ಡ್ ವಿತರಕರು ಒತ್ತಡ ಹೇರುವಂತೆ ಇಲ್ಲ. ಇದು ವಿಳಂಬಕ್ಕೆ ಕಾರಣವಾದೀತು.
  •              ಒಂದೊಮ್ಮೆ ಕ್ರೆಡಿಟ್ ಕಾರ್ಡ್ ವಿತರಕರು ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಮನವಿ ಪಡೆದ ಏಳು ದಿನಗಳ ಒಳಗೆ ಅದನ್ನು ಅನುಷ್ಠಾನಗೊಳಿಸದೇ ಇದ್ದರೆ ದಿನಕ್ಕೆ 500 ರೂಪಾಯಿಯಂತೆ ಆ ಖಾತೆ ಮುಚ್ಚುವ ತನಕದ ದಿನಗಳ ಅವಧಿಯ ಮೊತ್ತವನ್ನು ಗ್ರಾಹಕರಿಗೆ ನೀಡಬೇಕು. ಇಲ್ಲಿ ಗ್ರಾಹಕರು ಯಾವುದೇ ಬಾಕಿ ಉಳಿಸಿಕೊಂಡಿರಬಾರದು.
  •             ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಕ್ರೆಡಿಟ್ ಕಾರ್ಡ್ ಬಳಸದೇ ಇದ್ದರೆ ಆಗ ಆ ಕಾರ್ಡ್ ಮುಚ್ಚುವ ತೀರ್ವನವನ್ನು ಕ್ರೆಡಿಟ್ ಕಾರ್ಡ್ ವಿತರಕರು ಕೈಗೊಂಡು ಕಾರ್ಡ್​ದಾರರಿಗೆ ಮಾಹಿತಿ ನೀಡಬೇಕು.
  •             ಈ ಮಾಹಿತಿ ಪಡೆದ ಬಳಿಕ 30 ದಿನಗಳ ಒಳಗೆ ಕಾರ್ಡ್ ಬಳಕೆದಾರರಿಂದ ಹಿಮ್ಮಾಹಿತಿ ಬಾರದೇ ಹೋದರೆ, ಬಳಕೆದಾರರು ಬಾಕಿ ಪಾವತಿಸಬೇಕಾದ್ದೇನೂ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಆ ಖಾತೆಯನ್ನು ಮುಚ್ಚಬಹುದು.
  • ಕ್ರೆಡಿಟ್ ಇನ್ಪಾಮೇಷನ್ ಕಂಪನಿಗೆ ಈ ರೀತಿ ಮುಚ್ಚಿದ ಖಾತೆಯ ಮಾಹಿತಿಯನ್ನು 30 ದಿನಗಳ ಒಳಗೆ ಕ್ರೆಡಿಟ್ ಕಾರ್ಡ್ ವಿತರಣಾ ಕಂಪನಿ ಒದಗಿಸಬೇಕು.
  •              ಕ್ರೆಡಿಟ್ ಕಾರ್ಡ್ ಖಾತೆ ಮುಚ್ಚಿದ ಬಳಿಕ ಅದರಲ್ಲಿ ಬಳಕೆದಾರರ ಹಣ ಇದ್ದರೆ ಅದನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು.

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries