ನವದೆಹಲಿ: 2022-23ನೇ ಶೈಕ್ಷಣಿಕ ವರ್ಷಕ್ಕೆ 10, 12ನೇ ತರಗತಿಗೆ ವಾರ್ಷಿಕ ಪರೀಕ್ಷೆ ಪದ್ಧತಿ ಅಥವಾ ಎರಡು ಅವಧಿಗೆ ಶೈಕ್ಷಣಿಕ ವರ್ಷವನ್ನು ವಿಭಜಿಸುವ ಪದ್ಧತಿ ಅನುಸರಿಸಬೇಕೆ ಎಂದು ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ಇನ್ನೂ ನಿರ್ಧರಿಸಿಲ್ಲ.
0
samarasasudhi
ಏಪ್ರಿಲ್ 15, 2022
ನವದೆಹಲಿ: 2022-23ನೇ ಶೈಕ್ಷಣಿಕ ವರ್ಷಕ್ಕೆ 10, 12ನೇ ತರಗತಿಗೆ ವಾರ್ಷಿಕ ಪರೀಕ್ಷೆ ಪದ್ಧತಿ ಅಥವಾ ಎರಡು ಅವಧಿಗೆ ಶೈಕ್ಷಣಿಕ ವರ್ಷವನ್ನು ವಿಭಜಿಸುವ ಪದ್ಧತಿ ಅನುಸರಿಸಬೇಕೆ ಎಂದು ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ಇನ್ನೂ ನಿರ್ಧರಿಸಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಮಂಡಳಿಯ ಅಧಿಕಾರಿಯೊಬ್ಬರು, 2022-23ನೇ ಶೈಕ್ಷಣಿಕ ವರ್ಷಕ್ಕೆ ಯಾವ ಪದ್ಧತಿ ಅನುಸರಿಸಬೇಕು ಎಂಬ ತೀರ್ಮಾನವನ್ನು ಆದಷ್ಟು ಶೀಘ್ರ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ 2021-22ನೇ ಶೈಕ್ಷಣಿಕ ಅವಧಿಯಲ್ಲಿ ಬದಲಾವಣೆ ತರಲಾಗಿತ್ತು. ಕಳೆದ ವರ್ಷ ಶೈಕ್ಷಣಿಕ ವರ್ಷವನ್ನು ವಿಭಜಿಸಿದ್ದು, ಮೊದಲ ಅವಧಿಯ ಪರೀಕ್ಷೆ ಡಿಸೆಂಬರ್‌ನಲ್ಲಿ ನಡೆದಿತ್ತು. ಎರಡನೇ ಅವಧಿ ಪರೀಕ್ಷೆಗಳು ಏಪ್ರಿಲ್ 26ರಿಂದ ಆರಂಭವಾಗಬೇಕಿದೆ.
ದೆಹಲಿಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಮತ್ತೆ ಏರುತ್ತಿರುವುದು ಈಗ ಆತಂಕ ಮೂಡಿಸಿದೆ. ಕೆಲವು ಶಾಲೆಗಳು ಈಗಾಗಲೇ ವಿದ್ಯಾರ್ಥಿ ಅಥವಾ ಸಿಬ್ಬಂದಿಗೆ ಸೋಂಕು ತಗುಲಿದ್ದ ಸಂದರ್ಭದಲ್ಲಿ ನಿರ್ದಿಷ್ಟ ತರಗತಿ ಅಥವಾ ವಿಭಾಗವನ್ನು ಬಂದ್ ಮಾಡುತ್ತಿವೆ.