HEALTH TIPS

ಎಸ್.ಎಸ್.ಎಲ್.ಸಿ. ಥಿಯರಿ ಪರೀಕ್ಷೆ ಮುಕ್ತಾಯ: ಪ್ರಾಯೋಗಿಕ ಪರೀಕ್ಷೆ ಮೇ.3 ರಿಂದ: ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರು 1457 ಮಂದಿ ವಿದ್ಯಾರ್ಥಿಗಳು

                  ತಿರುವನಂತಪುರಂ: ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಥಿಯರಿ ಪರೀಕ್ಷೆಗಳು ಇಂದು ಮುಕ್ತಾಯಗೊಂಡಿತು. 2961 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಇಂದು ಕನ್ನಡ/ ಮಲಯಾಳಂನ ಎರಡನೇ ಭಾಗದ ಪರೀಕ್ಷೆ ನಡೆದಿತ್ತು.  ಸಾಮಾನ್ಯ ವಿಭಾಗದಲ್ಲಿ 4,26,999 ಮತ್ತು ಖಾಸಗಿ ವಿಭಾಗದಲ್ಲಿ 408 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು.

                       ಪ್ರಾಯೋಗಿಕ ಪರೀಕ್ಷೆಗಳು ಮೇ 3 ರಂದು ಪ್ರಾರಂಭವಾಗುತ್ತವೆ. ಪ್ರಾಯೋಗಿಕ ಪರೀಕ್ಷೆಗಳು ಮೇ 10 ರವರೆಗೆ ನಡೆಯಲಿದೆ. ಇದರ ಬೆನ್ನಲ್ಲೇ ಮೇ 11ರಂದು ಮೌಲ್ಯಮಾಪನ ಆರಂಭಿಸಿ ಮೇ ಕೊನೆಯ ವಾರದೊಳಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

                  ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಮಾರ್ಚ್ 31 ರಂದು ರಾಜ್ಯದ 2943 ಕೇಂದ್ರಗಳಲ್ಲಿ, ಗಲ್ಫ್ ಪ್ರದೇಶದಲ್ಲಿ 9 ಕೇಂದ್ರಗಳಲ್ಲಿ ಮತ್ತು ಲಕ್ಷದ್ವೀಪದಲ್ಲಿ 9 ಕೇಂದ್ರಗಳಲ್ಲಿ ಎಂಬಂತೆ ಒಟ್ಟು 2961 ಕೇಂದ್ರಗಳಲ್ಲಿ ಪ್ರಾರಂಭವಾಯಿತು. 4,26,999 ಸಾಮಾನ್ಯ ವಿದ್ಯಾರ್ಥಿಗಳು ಮತ್ತು ಖಾಸಗಿ ವಲಯದ 408 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

              ಮಲಯಾಳಂ ಮಾಧ್ಯಮದಲ್ಲಿ 1,91,787 ವಿದ್ಯಾರ್ಥಿಗಳು, ಆಂಗ್ಲ ಮಾಧ್ಯಮದಲ್ಲಿ 2,31,604 ವಿದ್ಯಾರ್ಥಿಗಳು, ತಮಿಳು ಮಾಧ್ಯಮದಲ್ಲಿ 2151 ವಿದ್ಯಾರ್ಥಿಗಳು ಹಾಗೂ ಕನ್ನಡ ಮಾಧ್ಯಮದಲ್ಲಿ 1457 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ. ಒಟ್ಟು 2,18,902 ಬಾಲಕರು ಮತ್ತು 2,08,097 ಬಾಲಕಿಯರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries