ನವದೆಹಲಿ: ಸುಮಾರು 3.93 ಲಕ್ಷ ವಿದೇಶಿಗರು ತಮ್ಮ ವೀಸಾ ಅವಧಿ ಮುಗಿದ ನಂತರವೂ ಭಾರತದಲ್ಲೇ ನೆಲೆಸಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.
0
samarasasudhi
ಏಪ್ರಿಲ್ 05, 2022
ನವದೆಹಲಿ: ಸುಮಾರು 3.93 ಲಕ್ಷ ವಿದೇಶಿಗರು ತಮ್ಮ ವೀಸಾ ಅವಧಿ ಮುಗಿದ ನಂತರವೂ ಭಾರತದಲ್ಲೇ ನೆಲೆಸಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.
ಕಳೆದ ವರ್ಷ ಡಿಸೆಂಬರ್ ವರೆಗಿನ ಅಂಕಿಅಂಶದ ಪ್ರಕಾರ ಸುಮಾರು 3.93 ಲಕ್ಷ ವಿದೇಶಿಗರು ವೀಸಾ ಅವಧಿ ಮೀರಿ ರಾಷ್ಟ್ರದಲ್ಲಿ ನೆಲೆಸಿದ್ದಾರೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಮಂಗಳವಾರ ಹೇಳಿದ್ದಾರೆ.
'2019ರಲ್ಲಿ ವೀಸಾ ಅವಧಿ ಮೀರಿದ 25,143 ವಿದೇಶಿಗರು ಭಾರತದಿಂದ ಹಿಂತಿರುಗಿಲ್ಲ.
ವೀಸಾ ಅವಧಿ ಮುಗಿದ ನಂತರ ಅಕ್ರಮವಾಗಿ ರಾಷ್ಟ್ರದಲ್ಲಿ ನೆಲೆಸಿರುವ ವಿದೇಶಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ರೈ ಹೇಳಿದ್ದಾರೆ.