ನವದೆಹಲಿ : ಶ್ರೀರಾಮನ ಜನ್ಮದಿನವನ್ನು ಆಚರಿಸುವ ರಾಮನವಮಿಯ ಅಂಗವಾಗಿ ರವಿವಾರ ನಡೆದ ಮೆರವಣಿಗೆಯಲ್ಲಿ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ಈ ನಾಲ್ಕು ರಾಜ್ಯಗಳಲ್ಲಿ ಕೋಮು ಘರ್ಷಣೆಗಳು ಸಂಭವಿಸಿವೆ ಎಂದು NDTV ವರದಿ ಮಾಡಿದೆ.
0
samarasasudhi
ಏಪ್ರಿಲ್ 11, 2022
ನವದೆಹಲಿ : ಶ್ರೀರಾಮನ ಜನ್ಮದಿನವನ್ನು ಆಚರಿಸುವ ರಾಮನವಮಿಯ ಅಂಗವಾಗಿ ರವಿವಾರ ನಡೆದ ಮೆರವಣಿಗೆಯಲ್ಲಿ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ಈ ನಾಲ್ಕು ರಾಜ್ಯಗಳಲ್ಲಿ ಕೋಮು ಘರ್ಷಣೆಗಳು ಸಂಭವಿಸಿವೆ ಎಂದು NDTV ವರದಿ ಮಾಡಿದೆ.
ರಾಮನವಮಿ ಮೆರವಣಿಗೆಯಲ್ಲಿ ಹಿಂಸಾಚಾರ ಹಾಗೂ ಬೆಂಕಿ ಹಚ್ಚಿದ ಘಟನೆಯ ನಂತರ ಮಧ್ಯಪ್ರದೇಶದ ಖಾರ್ಗೋನ್‌ನ ಕೆಲವು ಭಾಗಗಳಲ್ಲಿ ಕರ್ಫ್ಯೂ ಹೇರಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಜರಾತ್‌ನ ಆನಂದ್ ಜಿಲ್ಲೆಯ ಖಂಭತ್ ಹಾಗೂ ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದಲ್ಲಿ ಕೋಮು ಘರ್ಷಣೆಗಳು ನಡೆದಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಎರಡೂ ಸ್ಥಳಗಳಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವಿಕೆ ವರದಿಯಾಗಿದೆ ಹಾಗೂ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ರಾಮ ನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಗುಂಪುಗಳು ಘರ್ಷಣೆಯಾದ ಸ್ಥಳದಿಂದ ಸುಮಾರು 65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ" ಎಂದು ಗುಜರಾತ್ ನ ಖಂಭಾತ್‌ನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಜೀತ್ ರಾಜ್ಯನ್ ಹೇಳಿದರು.