ರಾಂಚಿ: ಹಾರಾಟ ಸಮಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಕೋಲ್ಕತ್ತ ಮಾರ್ಗದ ಇಂಡಿಗೊ ವಿಮಾನವು ರಾಂಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
0
samarasasudhi
ಏಪ್ರಿಲ್ 03, 2022
ರಾಂಚಿ: ಹಾರಾಟ ಸಮಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಕೋಲ್ಕತ್ತ ಮಾರ್ಗದ ಇಂಡಿಗೊ ವಿಮಾನವು ರಾಂಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ವಿಮಾನದಲ್ಲಿದ್ದ 62 ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ ಎಂದು ಡಿಜಿಸಿಎ ಅಧಿಕಾರಿ ತಿಳಿಸಿದ್ದಾರೆ.
ವಿಮಾನದ ಪೈಲಟ್ ಸಹಾಯಕ್ಕಾಗಿ ತುರ್ತು ಸಂದೇಶ (ಮೇ ಡೇ: ಮಾರಣಾಂತಿಕ ತುರ್ತುಸ್ಥಿತಿ) ಕಳಹಿಸಿದ ಕಾರಣ ರಾಂಚಿಯಲ್ಲಿ ವಿಮಾನ ಇಳಿಸಲು ಅವಕಾಶ ನೀಡಲಾಯಿತು. ಪ್ರಕರಣದ ತನಿಖೆಗೆ ಸರ್ಕಾರ ಆದೇಶ ನೀಡಿದೆ.
ವಿಮಾನದದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ಮುಂಜಾಗರೂಕತೆ ಕ್ರಮವಾಗಿ ಭೂಸ್ಪರ್ಶ ಮಾಡಿಸಲಾಯಿತು ಎಂದು ಡಿಜಿಸಿಎ ತಿಳಿಸಿದೆ.
ಕಡಿಮೆ ವೆಚ್ಚದ ವಿಮಾನಯಾನ ಸೇವೆ ಒದಗಿಸುತ್ತಿರುವ ಇಂಡಿಗೊ ಹಾಗೂ ಗೋ ಏರ್ ಸಂಸ್ಥೆಗಳ ವಿಮಾನಗಳಲ್ಲಿ ಪ್ರಾಟ್ ಅಂಡ್ ವಿಟ್ನಿ ಎಂಜಿನ್ ಬಳಸಲಾಗುತ್ತಿದೆ. ಬಳಕೆ ಶುರುವಾದಾಗಿನಿಂದಲೂ ಹಾರಾಟದ ಸಮಯದಲ್ಲಿ ಈ ಎಂಜಿನ್‌ಗಳು ಗಂಭೀರ ತೊಡಕು ಉಂಟು ಮಾಡುತ್ತಿವೆ.