HEALTH TIPS

ಮೊದಲ ಬಾರಿಗೆ ಭಾರತದಲ್ಲಿ ಸಭೆ ಸೇರಿದ ಕಾಮನ್ವೆಲ್ತ್ ಸಂಸದೀಯ ಸಂಘ

            ನವದೆಹಲಿಕಾಮನ್ವೆಲ್ತ್ ಸಂಸದೀಯ ಸಂಘ (ಸಿಪಿಎ)ದ ಮಧ್ಯ-ವಾರ್ಷಿಕ ಕಾರ್ಯಕಾರಿ ಸಮಿತಿಯು ಇದೇ ಮೊದಲ ಬಾರಿ ಭಾರತದಲ್ಲಿ ಸಭೆ ಸೇರಿದೆ.ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶನಿವಾರ ಗುವಾಹಟಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಉಪಸ್ಥಿತಿಯಲ್ಲಿ ಎರಡು ದಿನಗಳ ಸಿಪಿಎ ಸಭೆಯನ್ನು ಉದ್ಘಾಟಿಸಿದರು.

          53 ಕಾಮನ್ವೆಲ್ತ್ ದೇಶಗಳು ಮತ್ತು ಒಂಭತ್ತು ಪ್ರದೇಶಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.
              ಸಿಪಿಎ ಸಂಸದೀಯ ಪ್ರಜಾಪ್ರಭುತ್ವವನ್ನು ಹೊಂದಿರುವ ಕಾಮನ್ವೆಲ್ತ್ ದೇಶಗಳ ಸಂಸತ್ತುಗಳು ಮತ್ತು    ಶಾಸಕಾಂಗಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ.
                ಸಂಸದೀಯ ಪ್ರಜಾಪ್ರಭುತ್ವ,ವಿಶೇಷವಾಗಿ ಉತ್ತಮ ಆಡಳಿತ,ಪಾರದರ್ಶಕತೆ ಮತ್ತು ಉತ್ತರದಾಯಿತ್ವ,ಕಾನೂನಿನ ಆಡಳಿತಕ್ಕೆ ಗೌರವ,ವ್ಯಕ್ತಿಗತ ಹಕ್ಕುಗಳು ಮತ್ತು ಸ್ವಾತಂತ್ರಗಳ ಕುರಿತು ಜ್ಞಾನ ಮತ್ತು ತಿಳುವಳಿಕೆಯನ್ನು ಹೆಚ್ಚಿಸುವುದು ಸಿಪಿಎ ಉದ್ದೇಶವಾಗಿದೆ.
 ಸಿಪಿಎ 100 ವರ್ಷಗಳಷ್ಟು ಹಳೆಯ ಸಂಘಟನೆಯಾಗಿದೆ.

               ಸಿಪಿಎ ಸಭೆ ಎ.9 ಮತ್ತು 10ರಂದು ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವುದು ಗೌರವದ ವಿಷಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
              ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಇನ್ನಷ್ಟು ಪ್ರಜಾಸತ್ತಾತ್ಮಕವಾಗಿಸುವ ಬಗ್ಗೆ ಸಭೆಯು ಗಮನವನ್ನು ಕೇಂದ್ರೀಕರಿಸಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries