ಮಂಜೇಶ್ವರ: ವರ್ಕಾಡಿ ಮರಿಕಾಪು ಬೀಡು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ತಿಂಗಳ ಹುಣ್ಣಿಮೆ ಪೂಜೆಯ ಸಲುವಾಗಿ ಮರಿಕಾಪು ಶ್ರೀ ಸೋಮನಾಥ ಕಾರಂತರ ಪ್ರಾಯೋಜಕತ್ವದಲ್ಲಿ ಶ್ರೀಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಯಕ್ಷಗಾನ ತಾಳಮದ್ದಳೆ "ಗುರುದಕ್ಷಿಣೆ" ಇತ್ತೀಚೆಗೆ ಪ್ರಸ್ತುತಿಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು, ಕೇಶವ ಪ್ರಸಾದ್ ಶಿರಂತಡ್ಕ ಭಾಗವಹಿಸಿದ್ದು ಚೆಂಡೆ ಮದ್ದಳೆಯಲ್ಲಿ ವಿಕ್ರಂ ಮಯ್ಯ ಪೈವಳಿಕೆ, ಅಕ್ಷಯ ರಾವ್ ವಿಟ್ಲ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಪಾತ್ರಧಾರಿಗಳಾಗಿ ದ್ರೋಣ ರಾಜಾರಾಮ ರಾವ್ ಮೀಯಪದವು, ಏಕಲವ್ಯ ಗುರುರಾಜ ಹೊಳ್ಳ ಬಾಯಾರು ಹಾಗೂ ಅರ್ಜುನ ಯೋಗೀಶ ರಾವ್ ಚಿಗುರುಪಾದೆ, ಹಿರಣ್ಯಧನು ಗಣೇಶ ನಾವಡ ಮೀಯಪದವು ಭಾಗವಹಿಸಿ ಯಶಸ್ವಿಗೊಳಿಸಿದರು.




.jpg)
