ಪೆರ್ಲ: ಆರಾಧನಾ ಕಲಾ ವೈಭವ ಕಾರ್ಯಕ್ರಮ ರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜರುಗಿತು.ವೇದಮೂರ್ತಿ ಶಂಕರ ಉಪಾಧ್ಯಾಯ ಮಣಿಮುಂಡ ಇವರ ನೇತೃತ್ವದಲ್ಲಿ ಶತರುದ್ರಾಭಿಷೇಕ ನಡೆಯಿತು. ನಂತರ ಆರಾಧನಾ ಸಂಗೀತ ಶಾಲೆಯ ಶಿಕ್ಷಕಿ ಗೀತಾ ಸಾರಡ್ಕ ಮತ್ತು ಶಿಷ್ಯವೃಂದದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಿತು.
ಪ್ರಸಾದ ಭೋಜನದ ನಂತರ ನೃತ್ಯ ವಿದುಷಿ ಪೂರ್ಣಶ್ರೀ ಸಾರಡ್ಕ ಇವರಿಂದ ಭರತನಾಟ್ಯ, ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ 'ಶಶಿಪ್ರಭಾ ಪರಿಣಯ ಮತ್ತು ಸುಧನ್ವ ಮೋಕ್ಷ' ಪ್ರದರ್ಶನಗೊಂಡಿತು. ಈ ಸಂದರ್ಭ ಯಕ್ಷಗಾನ ನಾಟ್ಯಾಚಾರ್ಯ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಗುರು ಸಬ್ಬಣಕೋಡಿ ರಾಮ ಭಟ್ ಅವರ ಕಲಾ ಸೇವೆ ಗುರುತಿಸಿ ಆರಾಧನಾ ಕಲಾಭವನದ ವತಿಯಿಂದ ಶಂಕರ್ ಸಾರಡ್ಕ ಮತ್ತು ಗೀತ ಸಾರಡ್ಕ ಗೌರವಿಸಿ ಸನ್ಮಾನಿಸಿದರು. ಪಡ್ರೆ ಚಂದು ನಾಟ್ಯ ತರಬೇತಿ ಕೇಂದ್ರದ ಅಧ್ಯಕ್ಷ ರಾಮಚಂದ್ರ ಭಟ್ ಪನೆಯಾಲ ಉಪಸ್ಥಿತರಿದ್ದರು. ಅಗಲಿದ ಚೇತನ ಬಲಿಪ ಪ್ರಸಾದ ಭಾಗವತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.





