ಕಾಸರಗೋಡು: ಬೇಸಿಗೆ ಮಳೆ ಹಾಗೂ ಗಾಳಿಗೆ ಅಪಾರ ಕೃಷಿನಾಶವುಂಟಾಗಿದ್ದು, ಹಾನಿಗೊಳಗಾಗಿರುವ ಕೃಷಿಕರಿಗೆ ಅಗತ್ಯ ಧನಸಹಾಯ ಒದಗಿಸಿಕೊಡುವಂತೆ ಸ್ವತಂತ್ರ ರೈತ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ರೈತ ಸಂಘದ ಜಿಲ್ಲಾಧ್ಯಕ್ಷ ಸಿ.ಎ. ಅಬ್ದುಲ್ಲಕುಞÂ ಹಾಜಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಪಾಲತ್. ಹಾಗೂ ಜಿಲ್ಲಾ ಕೃಷಿ ಅಧಿಕಾರಿಗಳ ನೇತೃತ್ವದಲ್ಲಿ ಹಾನಿಗೊಳಗಾದ ಕೃಷಿಪ್ರದೇಶಕ್ಕೆ ಭೇಟಿ ನೀಡಿದರು. ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಹವಾಮಾನ ವೈಪರೀತ್ಯದಿಂದ ಮತ್ತಷ್ಟು ಹಾನಿಯುಂಟಾಗಿದ್ದು, ಇವರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಮುಖಂಡರು ಆಗ್ರಹಿಸಿದರು.




